Monday, June 23, 2025
26.6 C
Bengaluru
Google search engine
LIVE
ಮನೆಸಿನಿಮಾವಶಿಷ್ಠ ಸಿಂಹನನ್ನು ಹಾಡಿ ಹೊಗಳಿದ ಮಿಲ್ಕಿ ಬ್ಯೂಟಿ..!

ವಶಿಷ್ಠ ಸಿಂಹನನ್ನು ಹಾಡಿ ಹೊಗಳಿದ ಮಿಲ್ಕಿ ಬ್ಯೂಟಿ..!

ಬೆಂಗಳೂರು: ಭಾರತೀಯ ಜನಪ್ರಿಯ ​ ನಟಿ ಮಿಲ್ಕಿ ಬ್ಯೂಟಿ ತಮನ್ನಾ ಬಾಟಿಯಾ ಸ್ಯಾಂಡಲ್​ ವುಡ್​ ನಟ ವಶಿಷ್ಠ ಸಿಂಹನನ್ನು ಹಾಡಿ ಹೊಗಳಿದ್ದಾರೆ.

ಒಡೆಲಾ 2 ಸಿನಿಮಾವು ಒಡೆಲಾ ರೈಲ್ವೆ ಸ್ಟೇಶನ್‌ ಸಿನಿಮಾದ ಸೀಕ್ವೆಲ್‌. ಇದನ್ನ ಅಶೋಕ್‌ ತೇಜ್‌ ಅವರು ನಿರ್ದೇಶನ ಮಾಡಿದ್ದಾರೆ. ಇದೇ ತಿಂಗಳಲ್ಲೇ ಬಿಡುಗಡೆಯಾಗಲಿದೆ ಈ ಸಿನಿಮಾ. ಸದಾ ಐಟಂ ಸಾಂಗ್​ ಹಾಗೂ ಬೋಲ್ಡ್​​ ಬ್ಯೂಟಿಯಾಗಿ ಕಾಣಿಸೋ ತಮನ್ನಾ ಇದೇ ಮೊದಲ ಬಾರಿಗೆ ಸಾಧ್ವಿ ಪಾತ್ರವೊಂದರಲ್ಲಿ ನಟಿಸಿದ್ದಾರೆ. ತಮನ್ನಾ ಭಾಟಿಯಾ ಈ ಸಿನಿಮಾದಲ್ಲಿ ಶಿವಶಕ್ತಿಯಾಗಿ ನಟಿಸಿದ್ದಾರೆ. ಒಡೆಲಾ- 2 ಸಿನಿಮಾ ಏಪ್ರಿಲ್‌ 17ರಂದು ರಿಲೀಸ್‌ ಆಗಲಿದ್ದು. ಚಿತ್ರದಲ್ಲಿ ತಮನ್ನಾ ಜೊತೆ ವಸಿಷ್ಠ ಸಿಂಹ ಕೂಡ ನಟಿಸಿದ್ದಾರೆ. ಒಡೆಲಾ-2 ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದ್ದು, ಈ ಸಮಾರಂಭದಲಿ ತಮನ್ನಾ ಅವರು, ವಸಿಷ್ಠ ಸಿಂಹ ಅವರನ್ನ ಬಾಯ್ತುಂಬ ಹೊಗಳಿದ್ದಾರೆ. ವಸಿಷ್ಠ ಸಿಂಹ ಬಗ್ಗೆ ಮಾತನಾಡಿದ ತಮನ್ನಾ ಭಾಟಿಯಾ ಮೊದಲ ಬಾರಿಗೆ ನಾನು ವಸಿಷ್ಠ ಸಿಂಹ ಅವರ ಜೊತೆ ನಟಿಸಿದ್ದೇನೆ. ಅವರು ಪವರ್‌ಫುಲ್‌ ನಟ. ಅವರ ನಟನೆ ಪ್ರೇಕ್ಷಕರ ಮನದಲ್ಲಿ ನೆನಪಿನಲ್ಲಿ ಉಳಿಯುತ್ತದೆ. ವಸಿಷ್ಠ ಅವರಿಗೆ ಒಳ್ಳೆ ಭವಿಷ್ಯವಿದೆ. ಒಡೆಲಾ-2 ಸಿನಿಮಾದಲ್ಲಿ ಒಂದು ಡಿವೈನ್ ಪವರ್ ಇದೆ ಎಂದು ತಮನ್ನಾ ಬಾಟಿಯಾ ಹೇಳಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments