ಹಾಲಿಲ್ಲದೆ ರುಚಿಕರವಾದ ಹಾಲು ಕೋವಾ ಮಾಡುವ ವಿಧಾನ ….

ಬೇಕಾಗುವ ಪದಾರ್ಥಗಳು….

. ಮೈದಾ ಹಿಟ್ಟು – 2  ಚಿಕ್ಕ ಬಟ್ಟಲು

. ತುಪ್ಪ – 1 ಬಟ್ಟಲು

. ಸಕ್ಕರೆ – 1 ½ ಬಟ್ಟಲು

.  ಏಲಕ್ಕಿ – 4-5

ಮಾಡುವ ವಿಧಾನ …

. ಒಂದು ಪಾತ್ರೆಯಲ್ಲಿ 1 ಕಪ್ ತುಪ್ಪ ಮತ್ತು 2 ಕಪ್ ಮೈದಾವನ್ನು ಹಾಕಿ. ಕಡಿಮೆ ಉರಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. 10 ನಿಮಿಷಗಳ ಬಳಿಕ ಮೈದಾ ತುಪ್ಪದೊಂದಿಗೆ ಚಿನ್ನಾಗಿ ಮಿಶ್ರಣವಾಗಿ ಗಟ್ಟಿಯಾಗಲು ಶುರುವಾಗುತ್ತದೆ. ಗಟ್ಟಿಯಾದ ಬಳಿಕ ಇದನ್ನು ಒಂದು ಪಾತ್ರೆಗೆ ವರ್ಗಾಯಿಸಿ ತಣ್ಣಗಾಗಲು ಬಿಡಿ.

. ಮಿಕ್ಸಿ ಜಾರ್​ಗೆ ಸಕ್ಕರೆ ಹಾಗೂ ಏಲಕ್ಕಿ ಪುಡಿ ಹಾಕಿ  ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ಸ್ವಲ್ಪ ಸ್ವಲ್ಪವೇ ಮೈದಾಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದು ಗಟ್ಟಿಯಾಗುತ್ತದೆ.

. ಇದನ್ನು ತುಪ್ಪ ಸವರಿದ ತಟ್ಟೆಗೆ ವರ್ಗಾಯಿಸಿ, ಸಮತಟ್ಟಾಗಿಸಿ, 2 ಗಂಟೆಗಳ ಕಾಲ ಫ್ರಿಡ್ಜ್​ನಲ್ಲಿಡಿ. ಬಳಿಕ ಫ್ರಿಡ್ಜ್​ನಿಂದ ಹೊರತೆಗೆದ 30 ನಿಮಿಷಗಳ ಬಳಿಕ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ. ಇದೀಗ ರುಚಿಕರವಾದ ಹಾಲು ಕೋವಾ ಸವಿಯಲು ಸಿದ್ದ.

By admin

Leave a Reply

Your email address will not be published. Required fields are marked *

Verified by MonsterInsights