ತುಮಕೂರು: ತುಮಕೂರು ಮೆಟ್ರೋಗೆ ರಾಜ್ಯ ಸರ್ಕಾರ ಮನವಿ ಮಾಡಿದೆ. ಅದಕ್ಕೇನು ಮಾಡ್ಬೇಕೋ ಮಾಡ್ತಿದ್ದೀವಿ ಅಂತಾ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಶೀಘ್ರದಲ್ಲೇ 287 ಕಿಲೋ ಮೀಟರ್ ವಿಸ್ತಿರ್ಣದ ಸರ್ಕ್ಯೂಲರ್ ರೈಲು ಪ್ರಾರಂಭಿಸಲಾಗುವುದು. ನಮೋ ರೈಲನ್ನು ತುಮಕೂರಿನಿಂದ ಬೆಂಗಳೂರಿಗೆ ಮಾಡಿದ್ದೇವೆ. ಇದೀಗ ಮೈಸೂರಿಗೂ ವಿಸ್ತರಣೆ ಮಾಡಿದ್ದೇವೆ ಅಲ್ಲದೆ, ಬೆಂಗಳೂರು- ತುಮಕೂರು – ಹಾಸನ- ಮೈಸೂರು ನಡುವೆ ನಮೋ ರ್ಯಾಪಿಡ್ ರೈಲು ತರಲು ಚಿಂತನೆ ನಡೆದಿದೆ ಎಂದರು. ಇದೇ ವೇಳೆ ತುಮಕೂರು ರೈಲ್ವೇ ನಿಲ್ದಾಣಕ್ಕೆ ಶ್ರೀ ಶಿವಕುಮಾರ ಸ್ವಾಮೀಜಿ ಹೆಸರಿಡುವ ವಿಚಾರವಾಗಿ ಕೇಂದ್ರ ಗೃಹ ಇಲಾಖೆಯಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ರಾಜ್ಯ ಸರ್ಕಾರಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ ಅಂತ ಪತ್ರ ಬರೆದಿದ್ದೇವೆ ಎಂದು ಹೇಳಿದ್ದಾರೆ.


