Wednesday, April 30, 2025
29.2 C
Bengaluru
LIVE
ಮನೆಮನರಂಜನೆಚಾಲೆಂಜಿಂಗ್ ಸ್ಟಾರ್ ಜೊತೆ ಕೈ ಜೋಡಿಸ್ತಾರಾ ಮೆಗಸ್ಟಾರ್..??

ಚಾಲೆಂಜಿಂಗ್ ಸ್ಟಾರ್ ಜೊತೆ ಕೈ ಜೋಡಿಸ್ತಾರಾ ಮೆಗಸ್ಟಾರ್..??

ಸಿನಿಮಾ : ಸ್ಯಾಂಡಲ್​ವುಡ್ ಸಿನಿಮಾ ಇಂಡಸ್ಟ್ರಿಯಲ್ಲೂ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳು ತಯಾರಾಗ್ತಿದೆ. 22 ವರ್ಷಗಳ ಬಳಿಕ ನಟ ಮೆಗಸ್ಟಾರ್ ಚಿರಂಜೀವಿ ಚಂದನವನಕ್ಕೆ ಎಂಟ್ರಿ ಕೊಡ್ತಿದ್ದಾರಂತೆ. ಯಾವ ಸಿನಿಮಾ ಗೊತ್ತಾ..?

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಕರುನಾಡಿನಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ . 22 ವರ್ಷಗಳ ಹಿಂದೆ ನಟ ರವಿಚಂದ್ರನ್ ಜೊತೆ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದರು. ಇದೀಗ ಮತ್ತೆ ಕನ್ನಡ ಸಿನಿಮಾಗೆ ರೀ ಎಂಟ್ರಿ ಕೊಡ್ತಿದ್ದಾರೆ.

ಜೋಗಿ ಪ್ರೇಮ್ ಮತ್ತೆ ನಟ ಚಿರಂಜೀವಿಯನ್ನು ಕನ್ನಡಕ್ಕೆ ಕರೆತರುವ ಪ್ಲಾನ್ ಮಾಡಿದ್ದಾರೆ. ದರ್ಶನ್ ಜೊತೆ ಚಿರಂಜೀವಿ ಕೂಡ ಕೈ ಜೋಡಿಸಲಿದ್ದಾರೆ. ಚಾಲೆಂಜಿಗ್ ಸ್ಟಾರ್ ಹಾಗೂ ಮೆಗಾಸ್ಟಾರ್ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ.

ದರ್ಶನ್ ಹಾಗೂ ಪ್ರೇಮ್​ ಕಾಂಬಿನೇಷನ್ ಸಿನಿಮಾ ಈಗಾಗಲೇ ಭಾರೀ ಕೂತುಹಲ ಮೂಡಿಸಿದೆ. ಈ ನಡುವೆ ದರ್ಶನ್ ಜೊತೆ ಮೆಗಸ್ಟಾರ್ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಸ್ಯಾಂಡಲ್​ವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ಮೆಗಾಸ್ಟಾರ್ ಚಿರಂಜೀವಿಯನ್ನು ಮತ್ತೆ ಕನ್ನಡಕ್ಕೆ ಕರೆತರೋಕೆ ಪ್ಲಾನ್ ಮಾಡಿರೊ ಪ್ರೇಮ್, ಚಿರಂಜೀವಿಗೆ ಈಗಾಗಲೇ ಕಥೆ ಹೇಳಿ ಬಂದಿದ್ದಾರೆ. ಡಿಸೆಂಬರ್ 22ರಂದು ಹೈದ್ರಾಬಾದ್​ಗೆ ಹೋಗಿದ್ದ ಪ್ರೇಮ್ ಕತೆ ಹೇಳಿ ಬಂದಿದ್ದಾರೆ.

ಪ್ರೇಮ್ ಕಥೆ ಕೇಳಿ ಚಿರಂಜೀವಿ ಕೂಡ ಓಕೆ ಹೇಳಿದ್ದಾರೆ. ಎಲ್ಲವೂ ಅಂದುಕೊಂಡತೆ ಆದರೆ ಪ್ರೇಮ್ , ದರ್ಶನ್ ಹಾಗೂ ಚಿರಂಜೀವಿ ಕಾಂಬೋ ಸಿನಿಮಾ ಮಾಡೋದು ಫಿಕ್ಸ್ ಆಗಿದೆ.

ಡೇವಿಲ್ ಕಂಪ್ಲೀಟ್ ಮಾಡಿ ನಂತರ ಪ್ರೇಮ್ ಅಡ್ಡದಲ್ಲಿ ಕಾಣಿಸಲಿರುವ ದರ್ಶನ್ , 2024 ಜೂನ್​ನಲ್ಲಿ ಹೊಸ ಚಿತ್ರದ ಶೂಟಿಂಗ್ ಮಾಡಲು ಪ್ಲಾನ್ ಮಾಡಿದ್ದಾರೆ. ಕೆವಿಎನ್ ಪ್ರೊಡೆಕ್ಷನ್ ದರ್ಶನ್ ಹಾಗೂ ಚಿರಂಜೀವಿ ಕಾಂಬಿನೇಷನ್​ನಲ್ಲಿ ಬಿಗ್ ಬಜೆಟ್ ಸಿನಿಮಾ ಮಾಡಲು ರೆಡಿಯಾಗಿದೆ. ಕೆವಿಎನ್ ಪ್ರೊಡಕ್ಷನ್ ಈಗಾಗಲೇ ಅನೆಕ ಬಿಗ್ ಬಜೆಟ್ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments