Top Newsಸಿನಿಮಾಸುದ್ದಿ

ಮೆಗಾಸ್ಟಾರ್ ಹುಟ್ಟು ಹಬ್ಬವನ್ನ ತಿರುಮಲದಲ್ಲಿ ಆಚರಣೆಯ ಎಕ್ಸ್ಲೂಸಿವ್ ವಿಡಿಯೋ..!

ಟಾಲಿವುಡ್‌ ಸೂಪರ್ ಸ್ಟಾರ್ ಚಿರಂಜೀವಿ 69ನೇ ಜನ್ಮ ದಿನ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಇವರ ಬಗ್ಗೆ ನಿಮಗೆ ಗೊತ್ತಿರದೇ ಇರೋ ಒಂದಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿವೆ ಓದಿ. ಟಾಲಿವುಡ್ ನಟ ಚಿರಂಜೀವಿ ಅವರಿಗೆ ಇಂದು ಜನ್ಮದಿನದಂದೆ ಮೆಗಾಸ್ಟಾರ್ ತಮ್ಮ ಕುಟುಂಬ ಸಮೇತರಾಗಿ ಬಂದು ವೆಂಕಟರಮಣನ ದರ್ಶನ ಪಡೆದಿದ್ದಾರೆ. ಇಂದು ಬೆಳಿಗ್ಗೆ ಸುಪ್ರಭಾತ ಸಮಯದಲ್ಲಿ ತಿರುಮಲಕ್ಕೆ ಆಗಮಿಸಿದರು.  ದೇವಸ್ಥಾನದಲ್ಲಿ ಚಿರಂಜೀವಿಯನ್ನು ನೋಡಿ ಸಾರ್ವಜನಿಕರು ಸಂತೋಷ ಪಟ್ಟಿದ್ದು, ಮೆಗಾಸ್ಟಾರ್ ಅವರಿಗೆ ಅಭಿಮಾನಿಗಳು  ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.

ಟಾಲಿವುಡ್ ನಟ ಚಿರಂಜೀವಿ ಅವರ ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯಗಳು ಬರುತ್ತಿವೆ. ಅವರಿಗೆ ಇದು 69ನೇ ವರ್ಷದ ಜನ್ಮದಿನವಾಗಿದ್ದು, ಈ ವಯಸ್ಸಿನಲ್ಲೂ ಅವರು ಫಿಟ್ ಆಗಿದ್ದಾರೆ. ಹಲವು ಚಿತ್ರಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಫಿಟ್ನೆಸ್​ಗಾಗಿ ಜಿಮ್ ಮಾಡುತ್ತಾರೆ. ಅವರು ದಕ್ಷಿಣ ಭಾರತದ ಶ್ರೀಮಂತ ನಟರಲ್ಲಿ ಅವರೂ ಒಬ್ಬರ.

 

 

ಚಿರಂಜೀವಿ ಅವರು ಸಿನಿಮಾ ಕೆಲಸಗಳ ಜೊತೆಗೆ ಸಾಕಷ್ಟು ಸಾಮಾಜಿಕ ಕೆಲಸ ಮಾಡುತ್ತಾರೆ. ಅವರು ಹಲವು ಒಳ್ಳೆಯ ಕೆಲಸಗಳನ್ನು ಈವರೆಗೆ ಮಾಡಿದ್ದಾರೆ. ಅವರ ಹೆಸರಲ್ಲಿ ಬ್ಲಡ್ ಬ್ಯಾಂಕ್ ಕೂಡ ಇದೆ. ಹಲವು ಕಡೆಗಳಲ್ಲಿ ಚಿರಂಜೀವಿ ಹೂಡಿಕೆ ಮಾಡಿದ್ದಾರೆ. ಚಿರಂಜೀವಿ ಅವರು ಜನ್ಮದಿನಕ್ಕೂ ಮುನ್ನ ಅವರು ತಿರುಮಲಕ್ಕೆ ಭೇಟಿ ನೀಡಿದ್ದರು. ಅವರು ದೇವರ ದರ್ಶನ ಪಡೆದು ಬಂದಿದ್ದಾರೆ.

Comments (0)

Your email address will not be published. Required fields are marked *

Back to top button