ರಾಮನ ಹೆಸರು ಇಟ್ಟಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು ರಾಮನ ಆದರ್ಶ ಹಾಗೂ ಜನಾನುರಾಗ ಅವರೂ ಪಡೆಯಲಿ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು. ನಗರಕ್ಕೆ ಮಂಗಳವಾರ ಆಗಮಿಸಿದ್ದ ಸ್ವಾಮೀಜಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ಮಾಜಿ ಸಚಿವ ಎಚ್.ಆಂಜನೇಯ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ರಾಮನ ಆದರ್ಶ ಹಾಗೂ ಜನಾನುರಾಗ ಸಿದ್ದರಾಮಯ್ಯ ಪಡೆದರೆ ಅವರನ್ನೂ ನಾವು ಕೂಡ ಅಭಿನಂದಿಸೋಣ ಎಂದರು.
ಶ್ರೀರಾಮ ಎಲ್ಲ ರೀತಿಯಲ್ಲಿ ಅನುಕರಣೀಯ ಹಾಗೂ ಆದರ್ಶ ವ್ಯಕ್ತಿಯಾಗಿದ್ದು, ಅವರನ್ನು ಇನ್ನೊಬ್ಬರೊಂದಿಗೆ ಹೋಲಿಸುವುದು ಅಲ್ಲ. ನೀನು ಹೇಗಿರಬೇಕು ಎಂದು ಹೇಳುವಾಗ ಎಲ್ಲರೂ ಕೂಡ ದೃಷ್ಟಾಂತ ಕೊಡೋದು ಶ್ರೀರಾಮನಂತೆ ನೀನು ಇರು ಅಂತ. ಆದ್ದರಿಂದ ಅವರಂತಹ ಆದರ್ಶ ಪಡೆಯಲಿ ಎಂದು ತಿಳಿಸಿದರು. ಸಮಸ್ತ ಭಾರತೀಯರ ಹಾಗೂ ಹಿಂದೂಗಳ ವಿಶೇಷವಾದ ಕನಸು ಈಗ ನನಸಾಗುತ್ತಿದೆ. ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಹಾಗೂ ಪೂಜೆ ಆಗಬೇಕು ಎಂಬುದು ಶತ ಶತಮಾನಗಳ ಬೇಡಿಕೆಯಾಗಿತ್ತು. ಅದು ಈಗ ಸಂಪನ್ನವಾಗಿದೆ ಎಂದರು.
ಜ. 22ರಂದು ಶುಭ ಮುಹೂರ್ತದಲ್ಲಿ ಶಾಸ್ತೊçÃಕ್ತವಾಗಿ ಬಾಲ ರಾಮನ ಮೂರ್ತಿ ಪ್ರತಿಷ್ಠಾಪನೆ ಆಗುತ್ತಿದೆ. ಇದು ಸಮಸ್ತ ಭಾರತೀಯರಿಗೆ ಹಬ್ಬದ ಸನ್ನಿವೇಶ. ಶ್ರೀರಾಮ ಒಂದು ಜನಾಂಗಕ್ಕೆ ಸೀಮಿತವಲ್ಲ. ರಾಮ ಆದರ್ಶ ಪ್ರಭು ಅವರ ಆದರ್ಶಗಳು ಸಮಸ್ತ ಮನುಕುಲಕ್ಕೆ ಆದರ್ಶವಾಗಿವೆ. ಆದ್ದರಿಂದ ಹಿಂದೂ- ಹಿಂದೂಯೇತರರಿಗೆ ಎನ್ನುವುದಕ್ಕಿಂತ ಸಮಸ್ತ ಭಾರತೀಯರಿಗೆ ಅನುಕರಣೀಯ ಹಾಗೂ ಆರಾಧ್ಯ ದೇವರಾದ ರಾಮನ ಮಂದಿರ ನಿರ್ಮಾಣ ನಮ್ಮೆಲ್ಲರ ಸೌಭಾಗ್ಯ ಹಾಗೂ ಉತ್ಸವ ಎಂದರು.