ಬೆಂಗಳೂರು : ನಾನು ಇಂದು ಸಮಾಜಕ್ಕೆ ಅರ್ಪಣೆಯಾಗಲು ತುಮ ಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಶ್ರೀಗಳು ಕಾರಣ. ನಾಡು ಕಂಡ ಮುತ್ಸದಿ ರಾಜಕಾರಣಿ, ಮಾಜಿ ಪ್ರಧಾನಿ ದೇವೇ ಗೌಡರ ಆಶೀರ್ವಾದವು ನಮಗೆ ಸಿಕ್ಕಿದೆ. ಅವರ ಆಶೀರ್ವಾದ ಮಠದ ಮೇಲೆ ಸದಾ ಇರಲಿ. ಮಠದ ಅಭಿ ವೃದ್ಧಿಗೆ ಎಲ್ಲರ ಸಹಕಾರ ಬೇಕು ಎಂದು ಪೀಠಾಧಿಪತಿ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠ ಹಾಗೂ ಆದಿಚುಂಚನಗಿರಿ ಮಠ ಎರಡೂ ಒಂದೇ. ನಾವೆಲ್ಲಾ ಒಂದೇ ಗುರು ಪರಂಪರೆಯವರಾಗಿದ್ದು. ನಾಥ ಪರಂಪರೆ ಮೂಲಕ ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.”ಮೈಸೂರು ರಸ್ತೆ ಕೆಂಗೇರಿಯಲ್ಲಿರುವ ಮಠದ ಆವರಣದಲ್ಲಿ ಭಾನುವಾರ ಬೆಳಗ್ಗೆ ನಿಶ್ಚಲಾನಂದನಾಥ ಮಹಾಸ್ವಾಮೀಜಿ ಅವರ ಪಟ್ಟಾಧಿಕಾರ ಮಹೋತ್ಸವದಲ್ಲಿ ಮಾತನಾಡಿದ ಅವರು, ಮಠದ ಗುರುಗಳಾದ ಚಂದ್ರಶೇಖರನಾಥ ಸ್ವಾಮೀಜಿ ಬಹಳಷ್ಟು ಕೊಡುಗೆ ನೀಡಿದ್ದಾರೆ.


