Monday, June 23, 2025
26.6 C
Bengaluru
Google search engine
LIVE
ಮನೆ#Exclusive NewsTop Newsಮರಾಠ ಮೀಸಲಾತಿ: ಜ.25ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ

ಮರಾಠ ಮೀಸಲಾತಿ: ಜ.25ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ

ಜಾಲ್ನಾ: ಮರಾಠರಿಗೆ ಒಬಿಸಿ ಕೋಟಾದಡಿಯಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಜನವರಿ 25, 2025 ರಂದು ಅನಿರ್ದಿಷ್ಟ ಉಪವಾಸ ಆರಂಭಿಸುವುದಾಗಿ ಹೋರಾಟಗಾರ ಮನೋಜ್ ಜಾರಂಗೆ ಅವರು ಮಂಗಳವಾರ ಘೋಷಿಸಿದ್ದಾರೆ.

ಇಂದು ಮಹಾರಾಷ್ಟ್ರದ ಜಾಲ್ನಾದ ಅಂತರವಾಳಿ ಸಾರ್ತಿ ಗ್ರಾಮದಲ್ಲಿ ಮಾಧ್ಯಮದವರನ್ನು ಜೊತೆ ಮಾತನಾಡಿದ ಅವರು, ಮರಾಠಾ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾ ಸ್ಥಳದಲ್ಲಿ ಜಮಾಯಿಸುವಂತೆ ಮನವಿ ಮಾಡಿದರು. ಯಾರೂ ಮನೆಯಲ್ಲಿ ಇರಬೇಡಿ. ಎಲ್ಲರೂ ಅಂತವಾಳಿ ಸಾರ್ತಿಗೆ ಬನ್ನಿ, ನಮ್ಮ ಶಕ್ತಿ ತೋರಿಸೋಣ ಎಂದು ಕರೆ ನೀಡಿದರು.

ಕೃಷಿಕ ಕುಂಬಿ ಸಮುದಾಯವು ಈಗಾಗಲೇ OBC ವರ್ಗದ ಅಡಿಯಲ್ಲಿ ಮೀಸಲಾತಿ ಪ್ರಯೋಜನಗಳನ್ನು ಪಡೆಯುತ್ತಿದೆ. ಆದಾಗ್ಯೂ ಭರವಸೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಜಾರಂಗೆ, ‘ಸರ್ಕಾರ ನಮಗೆ ಮೋಸ ಮಾಡಿದೆ. ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ನಾವು ಅವರನ್ನು ಬಿಡುವುದಿಲ್ಲ’ ಎಂದರು.

42 ವರ್ಷದ ಮನೋಜ್​ ಜಾರಂಗೆ ಅವರು 2023ರ ಆಗಸ್ಟ್​ 9 ರಿಂದ ಮರಾಠಾ ಮೀಸಲಾತಿಯ ವಿಷಯವಾಗಿ ಪದೇ ಪದೇ ಉಪವಾಸ ಸತ್ಯಾಗ್ರಹಗಳನ್ನು ನಡೆಸುತ್ತಿದ್ದಾರೆ. ಇದು ಜಾರಂಗೆ ಅವರ ಆರನೇ ಉಪವಾಸ ಸತ್ಯಾಗ್ರಹವಾಗಿದೆ. ಮೊದಲು 17 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದ್ದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments