ರಾಜ್ಯವೈರಲ್ ನ್ಯೂಸ್ಸುದ್ದಿ

ಮಹಿಳೆಯ ವಿಚಿತ್ರ ‘ಟ್ರಿಕ್ಸ್’ ನೋಡಿ ಕಾಂಡೋಮ್ ತಯಾರಕ ಕಂಪೆನಿಗಳೇ ಶಾಕ್!

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತವೆ. ಆದರೆ ಕೆಲವು ವಿಡಿಯೋಗಳು ಜನರನ್ನು ಅಚ್ಚರಿಯ ಮಡುವಿಗೆ ತಳ್ಳುವುದಲ್ಲದೆ, ನಗುವಿನ ಅಲೆ ಎಬ್ಬಿಸುತ್ತವೆ. ಸದ್ಯ ಇಂತಹದ್ದೇ ಒಂದು ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಸಂಚಲನ ಮೂಡಿಸಿದ್ದು, ಗರ್ಭನಿರೋಧಕವಾಗಿ ಬಳಸುವ ಕಾಂಡೋಮ್ ಅನ್ನು ಮಹಿಳೆಯೊಬ್ಬಳು ಕೈಕೋಳದಿಂದ ಬಿಡಿಸಿಕೊಳ್ಳಲು ಬಳಸಿದ್ದಾರೆ.


ಮಹಿಳೆಯೊಬ್ಬಳಿಗೆ ಕೈಕೋಳ ಹಾಕಿ ಕಂಬಕ್ಕೆ ಕಟ್ಟಲಾಗಿರುತ್ತದೆ. ಮೊದಲ ನೋಟಕ್ಕೆ ಆಕೆ ಸಂಕಷ್ಟದಲ್ಲಿದ್ದಾಳೆ ಎಂದೆನಿಸಿದರೂ, ಮುಂದಿನ ಕ್ಷಣದಲ್ಲಿ ಆಕೆ ತನ್ನ ಕೈಯಲ್ಲಿದ್ದ ಕಾಂಡೋಮ್ ಪ್ಯಾಕೆಟ್ ಹೊರತೆಗೆಯುತ್ತಾಳೆ. ಕಾಂಡೋಮ್ ಅನ್ನು ತನ್ನ ಅಂಗೈಗೆ ಹಾಕಿಕೊಂಡಾಗ, ಅದರಲ್ಲಿರುವ ನಯವಾದ ದ್ರವದ ಅಂಶದಿಂದಾಗಿ ಕೈಗಳು ಜಾರತೊಡಗುತ್ತವೆ. ಇದನ್ನೇ ಲಾಭವಾಗಿ ಬಳಸಿಕೊಂಡ ಮಹಿಳೆ, ಕ್ಷಣಾರ್ಧದಲ್ಲಿ ತನ್ನ ಕೈಗಳನ್ನು ಕೋಳದಿಂದ ಸುಲಭವಾಗಿ ಹೊರತೆಗೆದು ಎಲ್ಲರನ್ನೂ ದಬ್ಬಾಳಿಸುವಂತೆ ಮಾಡುತ್ತಾಳೆ.

‘viralsarcasm’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋಗೆ ನೆಟ್ಟಿಗರು ಫನ್ನಿ ಕಮೆಂಟ್‌ಗಳ ಸುರಿಮಳೆಗೈಯುತ್ತಿದ್ದಾರೆ. “ಕಾಂಡೋಮ್ ತಯಾರಿಸುವ ಕಂಪೆನಿಗಳಿಗೂ ಈ ಐಡಿಯಾ ಖಂಡಿತ ಗೊತ್ತಿರಲಿಲ್ಲ” ಎಂದು ಜನರು ಹಾಸ್ಯ ಮಾಡುತ್ತಿದ್ದಾರೆ.


ಕಾಂಡೋಮ್ ಎಂದರೆ ಕೇವಲ ಆಧುನಿಕ ಕಾಲದ ಆವಿಷ್ಕಾರವಲ್ಲ. ಇದರ ಇತಿಹಾಸ ಕ್ರಿಸ್ತಪೂರ್ವ 1350ರಷ್ಟು ಹಳೆಯದು. ಪ್ರಾಚೀನ ಈಜಿಪ್ಟಿನವರು ಸೋಂಕುಗಳಿಂದ ರಕ್ಷಣೆ ಪಡೆಯಲು ಇದನ್ನು ಬಳಸುತ್ತಿದ್ದರು ಎಂದು ಇತಿಹಾಸಕಾರರು ಹೇಳುತ್ತಾರೆ.16ನೇ ಶತಮಾನ: ಮೊದಲ ಬಾರಿಗೆ ಗರ್ಭನಿರೋಧಕವಾಗಿ ಇದರ ಪ್ರಯೋಗವಾಯಿತು

ಹಳೆಯ ಕಾಲದ ವಿನ್ಯಾಸ: ಆರಂಭದಲ್ಲಿ ಪ್ರಾಣಿಗಳ ಮೂತ್ರಕೋಶ ಅಥವಾ ಕರುಳಿನಿಂದ ಇವುಗಳನ್ನು ತಯಾರಿಸಲಾಗುತ್ತಿತ್ತು. ಜಪಾನ್‌ನಲ್ಲಿ ಆಮೆ ಚಿಪ್ಪಿನಿಂದ ಮಾಡಿದ ಸಾಧನಗಳ ಬಳಕೆಯೂ ಇತ್ತು.

ಆಧುನಿಕ ಬದಲಾವಣೆ: 1844ರಲ್ಲಿ ರಬ್ಬರ್ ಬಳಕೆ ಆರಂಭವಾದರೆ, 20ನೇ ಶತಮಾನದಲ್ಲಿ ಲ್ಯಾಟೆಕ್ಸ್ ತಂತ್ರಜ್ಞಾನ ಬಂದ ನಂತರ ಕಾಂಡೋಮ್‌ಗಳು ಇಂದಿನ ಆಧುನಿಕ ರೂಪ ಪಡೆದುಕೊಂಡವು. 1980ರ ದಶಕದಲ್ಲಿ ಎಚ್‌ಐವಿ/ಏಡ್ಸ್ ಬಗ್ಗೆ ಜಾಗೃತಿ ಹೆಚ್ಚಾದಂತೆ ಇದರ ಬಳಕೆ ಜಾಗತಿಕವಾಗಿ ವ್ಯಾಪಿಸಿತು.


ಒಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಕಾಂಡೋಮ್ ಕುರಿತು ಮೀಮ್ಸ್ ಮತ್ತು ಫನ್ನಿ ವಿಡಿಯೋಗಳು ಹರಿದಾಡುತ್ತಿದ್ದರೆ, ಮತ್ತೊಂದೆಡೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಕಾಲೇಜು ಮತ್ತು ಹಾಸ್ಟೆಲ್ ಪ್ರದೇಶಗಳಲ್ಲಿ ಇವುಗಳ ಅತಿಯಾದ ಬಳಕೆ ಕಂಡುಬರುತ್ತಿರುವುದು ಆತಂಕ ಮೂಡಿಸಿದೆ.

Comments (0)

Your email address will not be published. Required fields are marked *

Back to top button