ಮಂಗಳೂರು: ಉಳ್ಳಾಲ ತಾಲೂಕಿನ ಕೆಸಿ ರೋಡ್ ನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಶಾಖೆಗೆ ನುಗ್ಗಿ ಹಾಡಹಗಲೇ 10 ಕೋಟಿಗೂ ಹೆಚ್ಚು ದರೋಡೆ ನಡೆಸಿರುವ ಘಟನೆ ಶುಕ್ರವಾರ ನಡೆದಿದೆ. ಬೀದರ್ ಬಳಿಕ ನಡೆದಿರುವ ದರೋಡೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.
ಹಾಡಹಗಲೇ ಐದು ಮಂದಿ ಆಗಂತುಕರು ಫಿಯೆಟ್ ಕಾರಿನಲ್ಲಿ ಬಂದು ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ ಕೆ.ಸಿ.ರೋಡ್ ಶಾಖೆಯಿಂದ 5 ಲಕ್ಷ ನಗದು ಸೇರಿ 12 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿ ನಾಲ್ಕೈದು ಚೀಲದಲ್ಲಿ ಹಣ ತುಂಬಿಸಿಕೊಂಡು ಪರಾರಿಯಾಗಿದ್ದಾರೆ. ಗನ್, ತಲ್ವಾರ್, ಚಾಕು ತೋರಿಸಿ ದರೋಡೆ ಮಾಡಲಾಗಿದೆ. ದರೋಡೆಕೋರರ ಪತ್ತೆಗೆ ಎರಡು ತಂಡಗಳ ರಚನೆ ಮಾಡಲಾಗಿದೆ. ಬ್ಯಾಂಕ್‌ನ ಸಿಸಿ ಕ್ಯಾಮೆರಾ ಕೂಡಾ ಇಂದೇ ರಿಪೇರಿಗೆ ನೀಡಲಾಗಿತ್ತು. ಈ ಹಿನ್ನೆಲೆ ಬ್ಯಾಂಕ್ ಸಿಬ್ಬಂದಿಯ ಮೇಲೆಯೇ ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಪ್ರಕರಣದ ಕುರಿತು ಪ್ರತ್ಯಕ್ಷದರ್ಶಿ ಎದುರು ಮನೆಯ ಉಷಾ ಮಾತನಾಡಿ, ಐದು ಮಂದಿ ಬ್ಯಾಂಕ್‌ನಿಂದ ಬರುತ್ತಿರುವುದನ್ನು ನಾನು ನೋಡಿದೆ. ಇವರನ್ನು ಕಂಡು ನನಗೆ ಭಯವಾಯಿತು. ಮೊದಲು ನಾಲ್ಕು ಮಂದಿ ಒಂದು ಗೋಣಿಯಲ್ಲಿ ಹಣ ಎಳೆದುಕೊಂಡು ಬರುತ್ತಿದ್ದರು. ಕೊನೆಗೆ ಒಬ್ಬ ಓಡಿಕೊಂಡು ಬಂದಿದ್ದಾನೆ. ಐದು ಮಂದಿ ಕೂಡ ಮಾಸ್ಕ್ ಹಾಗೂ ಟೋಪಿ ಧರಿಸಿದ್ದರು. ಶುಕ್ರವಾರ ಹಿನ್ನೆಲೆ ರಸ್ತೆಯಲ್ಲಿ ಯಾರೂ ಇರಲಿಲ್ಲ ಎಂದು ಹೇಳಿದ್ದಾರೆ.
ಆಗಂತುಕರು ನಾಲ್ಕೈದು ಚೀಲದಲ್ಲಿ ಹಣ ತುಂಬಿಕೊಂಡು ಎಸ್ಕೇಪ್ ಆಗಿದ್ದಾರೆ. ಪಕ್ಕಾ ಪ್ಲ್ಯಾನ್ ಮಾಡಿ ದರೋಡೆ ಮಾಡಿದ್ದಾರೆ. ಮಂಗಳೂರಿನಲ್ಲಿ ಸಿಎಂ ಕಾರ್ಯಕ್ರಮ ಹಿನ್ನಲೆಯಲ್ಲಿ ಮಂಗಳೂರು ನಗರದಲ್ಲಿ ಪೊಲೀಸರ ಹೆಚ್ಚಿನ ಭದ್ರತೆಯಲ್ಲಿದ್ದರು. ಹಾಗೇ ಇಂದು ಶುಕ್ರವಾರ ಆದ ಕಾರಣ ಮುಸ್ಲಿಮರು ನಮಾಜ್ ಗಾಗಿ ಮಧ್ಯಾಹ್ನ ಮಸೀದಿಗೆ ತೆರಳಿದ್ದಾರೆ. ಇನ್ನು ಬ್ಯಾಂಕ್ ಸಿಸಿ ಕ್ಯಾಮೆರಾ ಕೂಡ ಹಾಳಾಗಿದ್ದು, ಅದನ್ನು ಇಂದೇ ರಿಪೇರಿಗೆ ನೀಡಲಾಗಿತ್ತು. ಸಿಸಿ ಕ್ಯಾಮರಾ ರಿಪೇರಿಗೆ ಮಾಡುವ ವೇಳೆ ಅದರ ವೈಯರ್ ಕಟ್ ಮಾಡಿದ ತಕ್ಷಣವೇ ಈ ಕೃತ್ಯ ಎಸಗಿದ್ದಾರೆ. ಇನ್ನು ಇಡೀ ರಸ್ತೆಯ ಉದ್ದಕೂ ಒಂದೇ ಒಂದು ಸಿಸಿಟಿವಿ ಇಲ್ಲ. CCTV ಇಲ್ಲದನ್ನು ಗಮನಿಸಿಯೇ ಬ್ಯಾಂಕ್ ದರೋಡೆ ಮಾಡಿದ್ದಾರೆ. ಇನ್ನು ಬ್ಯಾಂಕಿಗೆ ಒಬ್ಬ ಸೆಕ್ಯೂರಿಟಿ ಕೂಡ ಇಲ್ಲ. ಸ್ಥಳೀಯರು ಬ್ಯಾಂಕ್ ಸಿಬ್ಬಂದಿ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಇವರೆಲ್ಲ ಕಪ್ಪು ಬಣ್ಣದ ಫಿಯೆಟ್ ಕಾರಿನಲ್ಲಿ ಬ್ಯಾಂಕ್ ದರೋಡೆಗೆ ಬಂದಿದ್ದರು. ಬ್ಯಾಂಕ್ ನಲ್ಲಿ ಇದ್ದ ಎಲ್ಲಾ ಚಿನ್ನ ಹಾಗೂ ನಗದನ್ನು ಪಡೆದು ಸ್ಥಳದಿಂದ ಪರಾರಿಯಾಗಿದ್ದಾರೆ. ದರೋಡೆ ಕೃತ್ಯದಿಂದ ಬ್ಯಾಂಕ್ ನಲ್ಲಿ ಫೈಲ್ ಗಳು, ಪೇಪರ್‌ಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಮಂಗಳೂರಿನಲ್ಲಿ ಸಿಎಂ ಕಾರ್ಯಕ್ರಮ ಹಿನ್ನಲೆ ಮಂಗಳೂರು ನಗರದಲ್ಲಿ ಪೊಲೀಸರು ಹೆಚ್ಚಿನ ಭದ್ರತೆ ನೀಡಿದ್ದರು. ಬ್ಯಾಂಕ್ ಇರುವ ಜಾಗದಲ್ಲಿ ಮುಸ್ಲಿಂ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಶುಕ್ರವಾರ ನಮಾಜ್‌ಗಾಗಿ ಮಸೀದಿಗೆ ತೆರಳಿದ್ದರು. ಈ ಜಾಗದಲ್ಲಿ ಯಾರು ಇಲ್ಲ ಎಂಬುದನ್ನು ಖಚಿತ ಪಡಿಸಿಸಿಕೊಂಡೇ ಈ ಕೃತ್ಯವನ್ನು ಎಸಗಲಾಗಿದೆ.