ರಾಜ್ಯಸುದ್ದಿ

ಕ್ರೀಡಾ ಪ್ರೋತ್ಸಾಹ ಧನ, ಸಾಂಸ್ಕೃತಿಕ ಕಾಯ೯ಕ್ರಮಕ್ಕೆ ಸಹಾಯಧನ ಮಂಜೂರು ಮಾಡಿ ಚೆಕ್ ವಿತರಣೆ

ಮಂಗಳೂರು : ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ವಗ೯ದ ಸಾವ೯ಜನಿಕರಿಗೆ ಕ್ರೀಡಾ ಪ್ರೋತ್ಸಾಹ ಧನ ಹಾಗೂ ಸಾಂಸ್ಕೃತಿಕ ಕಾಯ೯ಕ್ರಮಕ್ಕೆ ಸಹಾಯಧನ ಮಂಜೂರು ಮಾಡಿ ಚೆಕ್ ಅನ್ನು ವಿತರಿಸಲಾಯಿತು.

ಸುಮಾರು 15 ಕ್ರೀಡಾಪಟುಗಳಿಗೆ ರೂ 4.50 ಲಕ್ಷ ಮೊತ್ತದ ಕ್ರೀಡಾ ಪ್ರೋತ್ಸಾಹ ಧನ ವಿತರಿಸಲಾಯಿತು.

ಮೇಯರ್ ಸುಧೀರ್ ಶೆಟ್ಟಿರವರು ಕಾಯ೯ಕ್ರಮದಲ್ಲಿ ನೆರೆದಿರುವ ಕ್ರೀಡಾ ಮಕ್ಕಳಿಗೆ ಹಾಗೂ ಅವರಿಗೆ ಪ್ರೋತ್ಸಾಹ ನೀಡುವ ಪೋಷಕರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

 

ಕಾಯ೯ಕ್ರಮದಲ್ಲಿ ಉಪಮೇಯರ್ ಸುನೀತ, ಸ್ಥಾಯಿ ಸಮಿತಿಯ ಅಧ್ಯಕ್ಷರುಗಳಾದ ವರುಣ್ ಚೌಟ, ಗಣೇಶ್ ಕುಲಾಲ್ ಮತ್ತು ಸದಸ್ಯರುಗಳಾದ ಶೋಭ ರಾಜೇಶ್, ಸಂಗೀತಾ ಆರ್ ನಾಯಕ್, ಸರಿತ ಶಶಿಧರ್, ಕಿಶೋರ್ ಕೊಟ್ಟಾರಿ, ವೀಣಾ ಮಂಗಳಾ, ಮನೋಹರ್ ಶೆಟ್ಟಿ, ನಯನ ಆರ್ ಕೋಟ್ಯಾನ್ ರವರು ಉಪಸ್ಥಿತರಿದ್ದರು.

Comments (0)

Your email address will not be published. Required fields are marked *

Back to top button