ವರಧಿ =ಯತೀಶ್ಮಂಡ್ಯ
ಮೇಲುಕೋಟೆ ; ಮೇಲುಕೋಟೆ ಹೋಬಳಿಯ ಮಾಣಿಕ್ಯನಹಳ್ಳಿಯ ದೀಪಿಕಾ(28) ಎಂಬ ಖಾಸಗಿ ಶಾಲೆಯ ಅತಿಥಿ ಶಿಕ್ಷಕಿ ಕೊಲೆಯಾಗಿದ್ದು ಯೋಗಾನರಸಿಂಹಸ್ವಾಮಿ ಬೆಟ್ಟದ ಹಿಂಭಾಗ ಮಣ್ಣಿನಲ್ಲಿ ಹೂತಿದ್ದ ಮಾದರಿಯಲ್ಲಿ ಶಿಕ್ಷಕಿಯ ಮೃತದೇಹ ಸೋಮವಾರ ಪತ್ತೆಯಾಗಿದೆ.
ಮಾಣಿಕ್ಯನಹಳ್ಳಿಯ ವೆಂಕಟೇಶ್ಎಂಬುವರ ಪುತ್ರಿಯಾದ ದೀಪಿಕಾ ಅದೇ ಗ್ರಾಮದ ಲೋಕೇಶ್ ಎಂಬಾತನನ್ನು ಮದುವೆಯಾಗಿದ್ದಳು. ಇವರಿಗೆ 8ವರ್ಷದ ಮಗು ಸಹ ಇದ್ದು ಮೇಲುಕೋಟೆ ಎಸ್.ಇ.ಟಿ ಪಬ್ಲಿಕ್ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಸೇವೆಸಲ್ಲಿಸುತ್ತಿದ್ದರು. ಪ್ರತಿದಿನ ತಮ್ಮ ಡಿಯೋ ಬೈಕ್ ಮೂಲಕ ಶಾಲೆಗೆ ಬಂದು ಹೋಗುತ್ತಿದ್ದ ದೀಪಿಕಾ ಜನವರಿ20ರ ಶನಿವಾರ ಶಾಲಾಕರ್ತವ್ಯಮುಗಿಸಿದ ಮದ್ಯಾಹ್ನ 12 ಗಂಟೆಯವೇಳೆಗೆ ಯಾವುದೋ ಪೋನ್ಕಾಲ್ ಬಂದ ಕಾರಣ ಬೈಕ್ ಮೂಲಕ ತೆರಳಿದ್ದಾರೆ. ಶನಿವಾರ ಯಾರದೋ ಬೈಕ್ ಬಹಳಹೊತ್ತಿನಿಂದ ಯೋಗಾನರಸಿಂಹಸ್ವಾಮಿ ಬೆಟ್ಟದ ಹಿಂಭಾಗ ನಿಂತಿರುವ ಬಗ್ಗೆ ಮಾಹಿತಿ ಬಂದಾಗ ಮೇಲುಕೋಟೆ ಪೊಲೀಸರು ಸ್ಥಳಕ್ಕೆ ತೆರಳಿ ಬೈಕ್ ವಶಕ್ಕೆ ಪಡೆದು ಸುತ್ತಮುತ್ತ ಹುಡುಕಿದ್ದಾರೆ ಯಾರೂ ಪತ್ತೆಯಾಗದ ಕಾರಣ ಬೈಕ್ ನಂಬರ್ ಆಧರಿಸಿ ಶಿಕ್ಷಕಿಯ ತಂದೆ ವೆಂಕಟೇಶ್ ಎಂಬುರನ್ನು ಕರೆಸಿ ಮಾಹಿತಿ ನೀಡಿದ್ದಾರೆ.
ಬೈಕ್ ತಮ್ಮ ಮಗಳದೇ ಎಂದು ಖಚಿತಪಡಿಸಿದ ವೆಂಕಟೇಶ್ ತಮ್ಮ ಮಗಳು ಕಾಣೆಯಾಗಿರುವ ಬಗ್ಗೆ ಮೇಲುಕೋಟೆ ಠಾಣೆಯಲ್ಲಿ 20ರಂದೇ ದೂರು ನೀಡಿದ ಪರಿಣಾಮ ಮೇಲುಕೋಟೆ ಠಾಣೆಯಲ್ಲಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ. ಸೋಮವಾರ ಮದ್ಯಾಹ್ನ 2 ಗಂಟೆ ಸಮಯದಲ್ಲಿ ಸಾರ್ವಜನಿಕರು ಮಣ್ಣುನೊಳಗೆ ಮಹಿಳೆಯ ಶವವಿರುವುದನ್ನು ತಿಳಿಸಿದಾಗ ಕಾಣೆಯಾದ ದೀಪಿಕಾಳ ಮೃತದೇಹ ಎಂಬುದು ಪತ್ತೆಯಾಗಿದೆ.