ನಾಗಮಂಗಲ : ಕೆ.ಆರ್.ಎಸ್ ಜಲಾಶಯದಿಂದ ನಾಲೆಗಳಿಗೆ ಹೊರ ಹರಿವು ಯಾವುದೇ ಕ್ಷಣದಲ್ಲಿ ಹೆಚ್ಚಾಗುವ ಸಂಭವವಿದ್ದು, ನಾಲೆ ಪಕ್ಕದಲ್ಲಿನ ಗ್ರಾಮಗಳು, ದೇವಸ್ಥಾನ, ರಸ್ತೆ ಸೇರಿದಂತೆ ಎಲ್ಲ ಕಡೆಗಳಲ್ಲೂ ಜನಸಾಮಾನ್ಯರು ಎಚ್ಚರಿಕೆ ವಹಿಸಬೇಕು ಎಂದು ಕೃಷಿ ಮತ್ತು ಜಿಲ್ಲಾಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ‘‘ಜಲಾಶಯದಲ್ಲಿ ಪ್ರಸ್ತುತ 120 ಅಡಿ ನೀರಿದ್ದು, 50 ಸಾವಿರ ಕ್ಯುಸೆಕ್ ನೀರು ನಾಲೆಗಳಿಗೆ ಹರಿಯುತ್ತಿದೆ. ಜಲಾಶಯದ ಒಳ ಹರಿವು ಹೆಚ್ಚಾದರೆ, ಹೊರ ಹರಿವು ಹೆಚ್ಚಾಗುವ ಸಂಭವವಿದೆ. ಹೊರ ಹರಿವು 1.50 ಲಕ್ಷ ಕ್ಯುಸೆಕ್‌ಗಿಂತ ಹೆಚ್ಚಾದರೆ ಹಲವೆಡೆ ಸಮಸ್ಯೆ ಉಂಟಾಗುವ ಬಗ್ಗೆ ಜಿಲ್ಲಾಡಳಿತ ದಿ ನೀಡಿದ್ದು, ಸಮಸ್ಯೆ ಇರುವ ಕಡೆಗಳಲ್ಲಿ ಈಗಾಗಲೇ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ,’’ ಎಂದರು.