Thursday, May 1, 2025
30.3 C
Bengaluru
LIVE
ಮನೆ#Exclusive NewsTop Newsಇಂದು ಮಹಾ ಬಿಜೆಪಿ ಶಾಸಕಾಂಗ ಸಭೆ: ಮಹಾರಾಷ್ಟ್ರದ ಹೊಸ ಸಿಎಂ ಹೆಸರು ಘೋಷಣೆ

ಇಂದು ಮಹಾ ಬಿಜೆಪಿ ಶಾಸಕಾಂಗ ಸಭೆ: ಮಹಾರಾಷ್ಟ್ರದ ಹೊಸ ಸಿಎಂ ಹೆಸರು ಘೋಷಣೆ

ಮುಂಬೈ: ಮಹರಾಷ್ಟ್ರದಲ್ಲಿ ಸರ್ಕಾರ ರಚನೆ ಕಸರತ್ತು ಇನ್ನೂ ನಡೆಯುತ್ತಿದೆ. ಇಂದು ಮುಂಬೈನಲ್ಲಿ ಬಿಜೆಪಿಯಿಂದ ಮಹತ್ವದ ಸಭೆ ನಡೆಯಲಿದೆ.
 ಶಾಸಕಾಂಗ ಪಕ್ಷದ ಸಭೆ ನಡೆಸಲಿದ್ದಾರೆ. ಮಾಜಿ ಸಿಎಂ ವಿಜಯ್ ರೂಪಾಣಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಸಿಎಂ ಆಯ್ಕೆ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ.
ಅಭಿಪ್ರಾಯ ಸಂಗ್ರಹದ ಬಳಿಕ ಸಿಎಂ ಅಭ್ಯರ್ಥಿ ಘೋಷಣೆ ಸಾಧ್ಯತೆ ಇದೆ. ನಾಳೆ ಸಿಎಂ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಈಗಾಗಲೇ ಸಿದ್ಧತೆ ನಡೆದಿದೆ.
ಏಕನಾಥ್ ಶಿಂಧೆ ಮನವೊಲಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಡಿಸಿಎಂ ಹುದ್ದೆಗೆ ಬಿಜೆಪಿ ನಾಯಕರು ಮನವೊಲಿಸಿದ್ದಾರೆ. ದೇವೇಂದ್ರ ಪಡ್ನವೀಸ್ ಸೇರಿದಂತೆ ಹಲವು ಪ್ರಮುಖರಿಂದ ಮನವೊಲಿಕೆ ಕಾರ್ಯ ಯಶಸ್ವಿಯಾಗಿದೆ.
ಸುದೀರ್ಘ ಸಭೆಗಳ ಬಳಿಕ ಡಿಸಿಎಂ ಸ್ಥಾನಕ್ಕೆ ಏಕನಾಥ್‌ ಶಿಂಧೆ ಒಪ್ಪಿಕೊಂಡಿದ್ದಾರೆ. ಹೀಗಾಗಿ, ದೇವೇಂದ್ರ ಪಡ್ನವೀಸ್ ಸಿಎಂ ಆಗಿ ಆಯ್ಕೆಯಾಗುವ ಸಾಧ್ಯತೆ ಇದೆ.
ಮಹರಾಷ್ಟ್ರದಲ್ಲಿ ಸರ್ಕಾರ ರಚನೆ ಸೂತ್ರ ಹೇಗಿದೆ?
* ಗೃಹ, ಕಂದಾಯ ಸೇರಿ 21-22 ಸಚಿವಾಲಯಗಳು ಬಿಜೆಪಿ ಪಾಲಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಜತೆಗೆ ಸ್ಪೀಕರ್ ಮತ್ತು ವಿಧಾನ ಪರಿಷತ್ ಅಧ್ಯಕ್ಷ ಸ್ಥಾನಗಳನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ.
* ಶಿವಸೇನೆಯು ಸಂಪುಟದಲ್ಲಿ 16 ಸಚಿವಾಲಯಗಳನ್ನು ನೀಡುವಂತೆ ಬೇಡಿಕೆಯಿಟ್ಟಿದೆ. ಆದರೆ, ನಗರಾಭಿವೃದ್ಧಿ ಸೇರಿ 12 ಖಾತೆಗಳಷ್ಟೇ ಶಿವಸೇನೆಗೆ ಸಿಗುವ ಸಾಧ್ಯತೆಯಿದೆ.
* ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಶಿವಸೇನೆ ಪೈಪೋಟಿ ನಡೆಸುತ್ತಿದ್ದು, ಈಗಾಗಲೇ ಉಪ ಸಭಾಪತಿ ಸ್ಥಾನವನ್ನು ಅಲಂಕರಿಸಿದೆ.
* ಹಣಕಾಸು, ಡೆಪ್ಯುಟಿ ಸ್ಪೀಕರ್ ಸೇರಿ 9-10 ಸಚಿವಾಲಯಗಳು ಎನ್‌ಸಿಪಿಗೆ ಲಭಿಸುವ ಸಾಧ್ಯತೆಯಿದೆ.
+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments