ಒಂದು ಕಡೆ ಕಮರ್ಷಿಯಲ್ ಹೀರೋ ಆಗಿದ್ದುಕೊಂಡು ಯಾವುದೇ ಇಮೇಜಿಗೆ ಅಂಟಿಕೊಳ್ಳದ ದಕ್ಷಿಣ ಭಾರತದ ಏಕೈಕ ಹೀರೋ ವಿಜತ್ ಸೇತುಪತಿ. ಒಂದು ಸಿನಿಮಾ ಹಿಟ್ ಆಗುತ್ತಿದ್ದಂತೇ ಅದರ ಗೆಲುವನ್ನು ತಲೆಗೇರಿಸಿಕೊಂಡು ಇಂಥದ್ದೇ ಪಾತ್ರ ಮಾಡುತ್ತೀನಿ ಅಂತಾ ಹಠ ಹಿಡಿಯುವವರೇ ಹೆಚ್ಚು. ಇಂಥವರ ನಡುವೆ ಅದ್ಯಾವುದೇ ರೋಲಾದರೂ ಕೊಡಿ. ಕಥೆ ಚೆನ್ನಾಗಿದ್ದರೆ ಮಾಡ್ತೀನಿ ಎನ್ನುವ ವಿಜಯ್ ಸೇತುಪತಿ ವಯಸ್ಸಿಗೆ ಮೀರಿದ ಪಾತ್ರಗಳನ್ನು ಮಾಡಿದವರು. ಪತ್ರಿ ಚಿತ್ರದಲ್ಲಿಯೂ ಪ್ರಯೋಗಾತ್ಮಕವಾಗಿಯೇ ತಮ್ಮನ್ನು ಒಡ್ಡಿಕೊಂಡವರು.
ಇಂಥಾ ವಿಜಯ್ ಸೇತುಪತಿ ಅಭಿನಯದ ಮಹಾರಾಜ ಚಿತ್ರ ಈಗ ಚೀನಾದಲ್ಲಿ ತೆರೆಗೆ ಬಂದಿದೆ. ಅಲ್ಲಿಯೂ ಕೂಡ ನಿರೀಕ್ಷೆಯನ್ನು ಮೀರಿದ ಪ್ರೀತಿ ಗಳಿಸಿದೆ. ಹೌದು, ನಿಮಗೆ ಗೊತ್ತಿರಲಿ ಭಾರತ ಹಾಗೂ ಚೀನಾ ನಡುವಿನ ಗಡಿ ಒಪ್ಪಂದದ ನಂತರ ಇದೇ ಮೊದಲ ಬಾರಿಗೆ ಭಾರತೀಯ ಚಿತ್ರವೊಂದು ವರ್ಷಗಳ ನಂತರ ಚೀನಾದಲ್ಲಿ ತೆರೆಗೆ ಬರುತ್ತಿದೆ. ಮಹಾರಾಜ ಮೂಲಕ ಮತ್ತೊಮ್ಮೆ ಚೀನಾದ ಬಾಕ್ಸಾಫೀಸ್ನಲ್ಲಿ ಭಾರತದ ಕಲರವ ಶುರುವಾಗಿದೆ. ಇನ್ನೂ ಚೀನಾದಲ್ಲಿ ಮೊದಲಿಂದ ಭಾರತೀಯ ಚಿತ್ರಗಳಿಗೆ ಪ್ರೇಕ್ಷಕರಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಅಮೀರ್ ಖಾನ್ ಅಭೀನಯದ ದಂಗಲ್ ಕೇವಲ ಚೀನಾವೊಂದರಲ್ಲಯೇ 1000 ಕೋಟಿಯನ್ನು ಗಳಿಸಿದೆ. ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದೆ.
ಕೇವಲ ದಂಗಲ್ ಮಾತ್ರ ಅಲ್ಲ ಅಮೀರ್ ಖಾನ್ ಅಭಿನಯದ ಸಿಕ್ರೆಟ್ ಸೂಪರ್ ಸ್ಟಾರ್, ಆಯುಶ್ಮಾನ್ ಖುರಾನ್ ಅಭಿನಯದ ಅಂಧಾದೂನ್, ಸಲ್ಮಾನ್ ಅಭಿನಯದ ಭಜರಂಗಿ ಭಾಯಿಜಾನ್ ಕೂಡ ಚೀನಾದ ನೆಲದಲ್ಲಿ ಕಮಾಲ್ ಮಾಡಿದೆ. ಭರ್ಜರಿ ಕಮಾಯಿಯನ್ನೂ ಮಾಡಿವೆ. ಇಂತಹ ನೆಲದಲ್ಲಿ ಅನೇಕ ವರ್ಷಗಳ ನಂತರ ಭಾರತದ ಚಿತ್ರ ತೆರೆಗೆ ಬರುತ್ತಿದ್ದ ಹಿನ್ನೆಲೆ ನಿರೀಕ್ಷೆ ಇದ್ದೇ ಇತ್ತು. ಚಿತ್ರಕ್ಕೆ ಹೇಗೆ ಪ್ರತಿಕ್ರಿಯೆ ಸಿಗಬಹುದು ಎನ್ನುವ ಕುತೂಹಲ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಪ್ರೀಮಿಯರ್ನಲ್ಲಯೇ ಮಹಾರಾಜ ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ಪ್ರೀಮಿಯರ್ನಲ್ಲಿ ಮಹಾರಾಜ 5.4 ಕೋಟಿಯನ್ನು ಗಳಿಸಿದೆ.
ಇನ್ನೂ 20ಕೋಟಿ ಬಜೆಟ್ನಲ್ಲಿ ನಿರ್ಮಾಣವಾಗಿ ಭಾರತದಲ್ಲಿ ಮಹಾರಾಜ ಚಿತ್ರ 100 ಕೋಟಿಯನ್ನು ಗಳಿಸಿತ್ತು. ಈಗ ಚೀನಾದಲ್ಲಿ ಕೇವಲ ಪ್ರೀಮಿಯರ್ ಪ್ರದರ್ಶನದಲ್ಲಿಯೇ ಚಿತ್ರ 5.4 ಕೋಟಿಯನ್ನು ಗಳಿಸಿದೆ. ಈ ಮೂಲಕ ಮಹಾರಾಜ ಚಿತ್ರದ ಒಟ್ಟಾರೆ ಗಳಿಕೆ 109 ಕೋಟಿಗೆ ತಲಿಪಿದೆ. ಇನ್ನೂ ಪ್ರೀಮಿಯರ್ನಲ್ಲಿ ಸಿಕ್ಕ ಪ್ರತಿಕ್ರಿಯರ, ಮಹಾರಾಜ ಚೀನಾದಲ್ಲಿ ಮ್ಯಾಜಿಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ ಎನ್ನುವ ಸುಳಿವನ್ನು ಮಹಾರಾಜ ಮುರಿಯಲಿದೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದಾರೆ.