Top Newsಜಿಲ್ಲೆ

ಡಿಕೆಶಿ ಏನು ಮಾಡ್ತಾರೋ ಮಾಡಲಿ – ಶಾಸಕ ಎಂಟಿ ಕೃಷ್ಣಪ್ಪ ಗುಟುರು

ನನ್ನ ಮೇಲೆ ಒಂದಲ್ಲದಿದ್ದರೆ ನೂರು ಕೇಸುಗಳನ್ನು ದಾಖಲಿಸಿಕೊಳ್ಳಿ.. ಆದ್ರೆ ಹೋರಾಟದಿಂದ ಹಿಂಜರಿಯುವುದೇ ಇಲ್ಲ ಹೆದರುವವನು ನಾನಲ್ಲ ಎಂದು ತುರುವೆಕೆರೆ ಶಾಸಕ ಎಂಟಿ ಕೃಷ್ಣಪ್ಪ ಗುಟುರು ಹಾಕಿದ್ದಾರೆ.

ತುರುವೇಕೆರೆಯಲ್ಲಿ ಮಾತಾಡಿದ ಎಂಟಿ ಕೃಷ್ಣಪ್ಪ, ಸರ್ಕಾರವು ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಹೋರಾಡುವ ರೈತರ ಮತ್ತು ಸಾರ್ವಜನಿಕರ ವಿರುದ್ಧ ಕೆಸು ದಾಖಲಿಸಿ ಹೋರಾಟ ಹತ್ತಿಕ್ಕುತ್ತಿದೆ ಎಂದು ಆಪಾದನೆ ಮಾಡಿದರು.

ಏಳು ದಿನಗಳ ಗಡುವನ್ನು ನೀಡುತ್ತಿದ್ದೇವೆ . ರೈತರ ಮತ್ತು ಮಠಾಧೀಶರುಗಳ ಮೇಲಿನ ಕೇಸುಗಳನ್ನು ವಾಪಸ್ಸು ಪಡೆದುಕೊಳ್ಳಬೇಕು.. ಇಲ್ಲ ಅಂದ್ರೆ ಎಸ್ ಪಿ ಕಚೇರಿಯ ಮುಂದೆ ಧರಣಿ ನಡೆಸ್ತೇವೆ ಎಂದು ಶಾಸಕ ಎಂಟಿ ಕೃಷ್ಣಪ್ಪ ಎಚ್ಚರಿಕೆ ನೀಡಿದ್ರು.

ಜಿಲ್ಲೆಯ ರೈತರ ಜೊತೆ ನಿಲ್ಲಬೇಕಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಅನ್ಯಾಯ ಮಾಡುವಲ್ಲಿ ಮುಂದಾಗಿದ್ದಾರೆ ರೈತರ ಪರವಾಗಿ ನಿಲ್ಲುವಲ್ಲಿ ವಿಫಲರಾಗಿದ್ದಾರೆ..

ಮಾನ್ಯ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಗುರವಾಗಿ ಮಾತನಾಡಿದ್ದಾರೆ. ನಮಗೆ ಮುಂದೆ ಏನು ಮಾಡಬೇಕು ಎಂಬುದು ಗೊತ್ತಿದೆ ಎಂದಿದ್ದಾರೆ. ಅವರಿಗೆ ಗೊತ್ತಿದ್ದರೆ ಮಾಡಿಕೊಳ್ಳಲಿ.. ಆದ್ರೆ ನಮ್ಮ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಎಂಟಿ ಕೃಷ್ಣಪ್ಪ ಎಚ್ಚರಿಕೆ ನೀಡಿದ್ರು.

Comments (0)

Your email address will not be published. Required fields are marked *

Back to top button