ಬಳ್ಳಾರಿ: ಸಿನಿಮಾ ಶೈಲಿಯಲ್ಲಿ ಪ್ರೇಮಿಗಳಿಬ್ಬರು ಮದುವೆಯಾಗಿರೋ ಸುದ್ದಿ ಇದೀಗ ರಾಜ್ಯದಲ್ಲಿ ಸಾಕಷ್ಟು ವೈರಲ್ ಆಗಿದೆ. ಯಶ್ ಅಭಿನಯದ ಕಿರಾತಕ ಸಿನಿಮಾ ನೋಡಿದ್ದೀರಿ ಅಲ್ವಾ..ಅದ್ರಲ್ಲಿ ಕಾರಿನಲ್ಲೇ ಹಾರ ಬದಲಿಸಿಕೊಳ್ಳೋ ಸೀನ್ ಇದೆ. ಅದೇ ರೀತಿ ಬಳ್ಳಾರಿಯಲ್ಲಿ ಪ್ರೇಮಿಗಳಿಬ್ಬರು ಮದುವೆ ಮಾಡಿಕೊಂಡಿದ್ದಾರೆ. ಹೌದು ಶಿವಪ್ರಸಾದ್ ಹಾಗೂ ಅಮೃತ ಪ್ರೇಮ ವಿವಾಹದ ಕಥೆ ಇದು.
ಅಂದಾಗೆ ಶಿವಪ್ರಸಾದ್, ಹಾಗೂ ಅಮೃತ ಪ್ರೀತಿಸುತ್ತಿದ್ರು. ಸಹಜವಾಗಿ ಈ ಪ್ರೀತಿಗೆ ಹೆತ್ತವರ ವಿರೋಧ ವ್ಯಕ್ತವಾಗಿತ್ತು. ಅದ್ರಲ್ಲೂ ಯುವತಿಯ ಪೋಷಕರು ಈ ಮದುವೆಗೆ ಸುತಾರಂ ಒಪ್ಪಿರಲಿಲ್ಲ.. ಹೀಗಾಗಿ ಇದೇ ವಿಚಾರವಾಗಿ ಗಲಾಟೆ ನಡೆದು ಬಳ್ಳಾರಿಯ ಶಾಂತಿಧಾಮ ಸಾಂತ್ವಾನ ಕೇಂದ್ರದಲ್ಲಿ ಅಮೃತಾ ಇದ್ದಳು.
ಇಂತಹ ಹುಡುಗಿ ಒಮ್ಮೆ ಪೋಷಕರು ಬೇಕು ಅಂದ್ರೆ, ಮತ್ತೊಮ್ಮೇ ಕೇಳಿದ್ರೆ, ಪ್ರಿಯತಮ ಬೇಕು ಅಂತ ದ್ವಂದ್ವ ಹೇಳಿಕೆ ನೀಡುತ್ತಿದ್ದಾಳೆ. ಇದನ್ನ ಕಂಡ ಪ್ರಿಯಕರ ಶಿವಪ್ರಸಾದ್, ಸಾಂತ್ವನ ಕೇಂದ್ರದ ಮುಂದೆಯೇ ಶಿವಪ್ರಸಾದ್ ಹಾಗೂ ಅಮೃತ ರಂಪಟಾಪ ಮಾಡಿದ್ದಾರೆ. ಕೆಲಕಾಲ ಗೊಂದಲದ ವಾತವರಣ ಕೂಡ ನಿರ್ಮಾಣ ಆಗಿದೆ.
ಈ ಬಳಿಕ ಅತ್ತ ಅಮೃತಾ ಪೋಷಕರು ಆಕೆಯನ್ನ ಬಲವಂತವಾಗಿ ಕರೆದುಕೊಂಡು ಹೋಗುವ ಯತ್ನ ಮಾಡಿದ್ದಾರೆ. ಇದರ ಬೆನ್ನಲ್ಲೆ ಶಿವಪ್ರಸಾದ್ ಕಾರು ಅಡ್ಡಗಟ್ಟಿ ಮದುವೆಯಾಗಿದ್ದಾನೆ. ಅಂದಾಗೆ ಶಿವಪ್ರಸಾದ್ ಮೂಲತಃ ಬಳ್ಳಾರಿಯ ತೆಕ್ಕಲಕೋಟೆಯವನು. ಇನ್ನು ಅಮೃತಾ ಕೊಪ್ಪಳ ಮೂಲದ ಹುಡುಗಿ.. ಇವರಿಬ್ಬರ ಹೈ ಡ್ರಾಮಾ ನಿನ್ನೆ ತಡರಾತ್ರಿಯವರೆಗೂ ನಡೆದಿದ್ದು, ಬಳ್ಳಾರಿಯ ಶಾಂತಿಧಾಮ ಸಾಂತ್ವಾನ ಕೇಂದ್ರದ ಮುಂದೆ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಇದೀಗ ಆಕೆ ಸಾಂತ್ವಾನ ಕೇಂದ್ರದಲ್ಲಿದ್ದಾಳೆ. ನನಗೆ ನನ್ನ ಪತ್ನಿ ಬೇಕು ಅಂತೇಳಿ ಶಿವಪ್ರಸಾದ್ ರಾತ್ರಿ ಪೂರ್ತಿ ಕೇಂದ್ರದ ಮುಂದೆಯೇ ಪಟ್ಟು ಹಿಡಿದು ಕೂತಿದ್ದಾನೆ. ಜಾತಿ ಹಿನ್ನೆಲೆ ಇವರಿಬ್ಬರ ಪ್ರೇಮ ವಿವಾಹಕ್ಕೆ ಪೋಷಕರು ಮಣೆ ಹಾಕಿಲ್ಲ. ಇದೀಗ ಬಳ್ಳಾರಿ ಠಾಣೆಯಲ್ಲಿ ಕೇಸು ರಿಜಿಸ್ಟರ್ ಆಗಿದ್ದು ಮುಂದಿನ ತನಿಖೆ ನಡೆಯುತ್ತಿದ್ದು..ಪ್ರೇಮಿಗಳು ಒಂದಾಗ್ತಾರಾ ಕಾದು ನೋಡಬೇಕು.