ಸಮಯ ಅನ್ನೋದು ಬೆಲೆ ಕಟ್ಟಲಾಗದ್ದು. ಆದ್ರೆ ಅದೇ ಸಮಯವನ್ನು ತಿಳಿಸುವ ವಾಚ್ಗೆ ಲಕ್ಷ ಲಕ್ಷ ಕೋಟಿ ಕೋಟಿ ಬೆಲೆಯಿದೆ. ಅಂಬಾನಿಯ ಅಂಟಿಲಿಯಾ ಬಂಗಲೆಯಲ್ಲಿರುವ ಕಾರ್ಗಳ ಮೌಲ್ಯದ ವಾಚ್ಗಳು ಕೂಡ ಬಜಾರ್ನಲ್ಲಿ ಬಂದಿವೆ.ವಾಚ್ಗಳು ಈಗ ಕೇವಲ ಟೈಮ್ಪೀಸ್ ಆಗಿ ಉಳಿದಕೊಂಡಿಲ್ಲ. ಐಷಾರಾಮಿತನದ ಗುರುತಾಗಿ ಉಳಿದಕೊಂಡಿವೆ. ಹೀಗಾಗಿಯೇ ಎಲಾನ್ ಮಸ್ಕ್, ಮಾರ್ಕ್ ಜುಕರ್ ಬರ್ಗ್ ಇವರು ಸಂದರ್ಶನದಲ್ಲಿ, ವಿಡಿಯೋದಲ್ಲಿ ಕಾಣಿಸಿಕೊಂಡಾಗ ಅವರು ಒಂದು ವೇಳೆ ವಾಚ್ ಧರಿಸಿದ್ದರೆ ಆ ವಾಚ್ನ ಬ್ರ್ಯಾಂಡ್ ಯಾವುದು, ಅದರ ಬೆಲೆ ಎಷ್ಟು ಇವೆಲ್ಲ ಮಾತುಗಳು ಮುನ್ನೆಲೆಗೆ ಬರುತ್ತವೆ. ಈಗ ಅದೇ ರೀತಿ ವಿಶ್ವದ ಅತ್ಯಂತ ದುಬಾರಿ ವಾಚ್ನ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಗಳು ಆಗುತ್ತಿವೆ.
ಸುಪ್ರೀಮ್ ಲಕ್ಸುರಿ ಗುರುತಾಗಿ, ಐಷಾರಾಮಿತನದ ಕಟ್ಟ ಕಡೆಯ ಎತ್ತರವಾಗಿ ಗುರುತಿಸಿಕೊಂಡಿದೆ ಹ್ಯಾಲುಸಿನೇಷನ್ ಎಂಬ ಈ ಡೈಮಂಡ್ ವಾಚ್. ಈ ವಾಚ್ನ ಬೆಲೆ ಕೇಳಿದ್ರೆ ಎಂತವರ ತಲೆಯೂ ಕೂಡ ಒಮ್ಮೆ ಗಿರಽ ಅನ್ನದೇ ಇರಲ್ಲ. ಈ ವಾಚ್ನ ಬೆಲೆ ಬರೋಬ್ಬರಿ 500 ಮಿಲಿಯನ್ ಡಾಲರ್, ಅಂದ್ರೆ ಭಾರತೀಯ ರೂಪಾಯಿಗಳಲ್ಲಿ 466 ಕೋಟಿ ರೂಪಾಯಿ ಎಂದರೆ ನೀವು ನಂಬಲೇಬೇಕು
ಇದನ್ನು ಅಪ್ಪಟ ವಜ್ರಗಳ ಹರುಳಿನಿಂದಲೇ ತಯಾರಿಸಲಾಗಿದೆ. ಲಾರೆನ್ಸ್ ಗ್ರಾಫ್ ಎಂಬ ಉದ್ಯಮಿ 2014ರಲ್ಲಿ ಈ ಒಂದು ಬಾಸಲ್ವರ್ಲ್ಡ್ಗೆ ಕಾಲಿಟ್ಟಿದ್ದರು. ವಿಶೇಷವಾದದ್ದು ಹಾಗೆ ಅಷ್ಟೇ ಐಶಾರಾಮಿ ಹಾಗೂ ಆಕರ್ಷಕ ವಾಚ್ ಸಿದ್ಧಪಡಿಸುವ ಗುರಿ ಅವರದ್ದಿತ್ತು. ಹೀಗಾಗಿ ಹಲವು ಬಣ್ಣದ ವಜ್ರಗಳಿಂದ ಕೂಡಿದ 110 ಕ್ಯಾರೆಟ್ನ ಈ ವಾಚ್ನ್ನು ಸಿದ್ಧಪಡಿಸಿದ್ದಾರೆ. ಈ ಹ್ಯಾಲುಸಿನೇಷನ್ ವಾಚ್ ಜಗತ್ತಿನಲ್ಲಿ ಅತ್ಯಂತ ವಿರಳವಾದ ಹಾಗೂ ದುಬಾರಿಯಾದ ವಾಚ್ನ ಪಟ್ಟಿಯಲ್ಲಿದೆ. ಹಲವು ಬಣ್ಣಗಳಲ್ಲಿ ಬರುವ ಈ ವಾಚ್ ತಿಳಿ ಗುಲಾಬಿ, ನೀಲಿ, ಹಸಿರು, ಆರೆಂಜ್ ಹಾಗೂ ಹಳದಿ ಬಣ್ಣಗಳಲ್ಲಿ ಈ ವಾಚ್ಗಳನ್ನು ಸಿದ್ಧಪಡಿಸಲಾಗಿದೆ.