Tuesday, June 24, 2025
27.5 C
Bengaluru
Google search engine
LIVE
ಮನೆಕ್ರಿಕೆಟ್ಒಂದೇ ಓವರ್​​ನಲ್ಲಿ 6 ಸಿಕ್ಸ್​​ ಸಿಡಿಸಿದ ಬ್ಯಾಟರ್ಸ್​​ ಇವರೇ ನೋಡಿ...!

ಒಂದೇ ಓವರ್​​ನಲ್ಲಿ 6 ಸಿಕ್ಸ್​​ ಸಿಡಿಸಿದ ಬ್ಯಾಟರ್ಸ್​​ ಇವರೇ ನೋಡಿ…!

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 5 ಬ್ಯಾಟರ್​ಗಳು ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿದ್ದಾರೆ. ಇವರಲ್ಲಿ ಮೊದಲಿಗರು ಸೌತ್ ಆಫ್ರಿಕಾದ ಹರ್ಷಲ್ ಗಿಬ್ಸ್​. 2007ರ ಏಕದಿನ ವಿಶ್ವಕಪ್​ ಪಂದ್ಯದಲ್ಲಿ ಗಿಬ್ಸ್ ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದಾದ ಬಳಿಕವಷ್ಟೇ ಟಿ20 ಕ್ರಿಕೆಟ್​ನಲ್ಲಿ ಯುವರಾಜ್ ಸಿಂಗ್ ಈ ಸಾಧನೆ ಮಾಡಿದ್ದರು.

ವೆಸ್ಟ್ ಇಂಡೀಸ್​ನಲ್ಲಿ ನಡೆದ 2007ರ ಏಕದಿನ ವಿಶ್ವಕಪ್​ನ 7ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ಹಾಗೂ ನೆದರ್​ಲೆಂಡ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ಪರ ಗಿಬ್ಸ್ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು.

ಈ ವೇಳೆ 30ನೇ ಓವರ್ ಎಸೆದ ಡಾನ್ ವ್ಯಾನ್ ಬಂಗೆ ಅವರ ಎಲ್ಲಾ ಎಸೆತಗಳಿಗೂ ಹರ್ಷಲ್ ಗಿಬ್ಸ್ ಸಿಕ್ಸ್​ಗಳ ಉತ್ತರ ನೀಡಿದರು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನ ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿದ ವಿಶ್ವ ದಾಖಲೆಯನ್ನು ಗಿಬ್ಸ್ ತಮ್ಮದಾಗಿಸಿಕೊಂಡರು. ಈ ದಾಖಲೆಗೆ ಇದೀಗ 18 ವರ್ಷ. ಅಂದರೆ ಮಾರ್ಚ್ 16, 2007ರಲ್ಲಿ ಹರ್ಷಲ್ ಗಿಬ್ಸ್ ಈ ಐತಿಹಾಸಿಕ ಸಾಧನೆ ಮಾಡಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿದ ಬ್ಯಾಟರ್​ಗಳು

ಹರ್ಷಲ್ ಗಿಬ್ಸ್ (ಸೌತ್ ಆಫ್ರಿಕಾ vs ನೆದರ್​ಲೆಂಡ್ಸ್​)- 2007ರ ಏಕದಿನ ವಿಶ್ವಕಪ್ ಪಂದ್ಯ
ಯುವರಾಜ್ ಸಿಂಗ್ (ಭಾರತ vs ಇಂಗ್ಲೆಂಡ್)- 2007ರ ಟಿ20 ವಿಶ್ವಕಪ್ ಪಂದ್ಯ
ಕೀರನ್ ಪೊಲಾರ್ಡ್ (ವೆಸ್ಟ್ ಇಂಡೀಸ್ vs ಶ್ರೀಲಂಕಾ)- 2021, ಟಿ20 ಪಂದ್ಯ
ಜಸ್ಕರನ್ ಮಲ್ಹೋತ್ರಾ (ಯುಎಸ್​ಎ vs ಪಪುವಾ ನ್ಯೂಗಿನಿಯಾ)- 2021, ಏಕದಿನ ಪಂದ್ಯ
ದೀಪೇಂದ್ರ ಸಿಂಗ್ ಐರಿ (ನೇಪಾಳ vs ಕತಾರ್)- 2024, ಟಿ20 ಪಂದ್ಯ

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments