ಬೆಂಗಳೂರು: ಇಂಧನ ಸಚಿವ ಕೆ.ಜೆ ಜಾರ್ಜ್ ವಿಶೇಷ ಕರ್ತವ್ಯ ಅಧಿಕಾರಿ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 50 ಸಾವಿರ ರೂಪಾಯಿ ಲಂಚದ ಹಣ ಸ್ವೀಕರಿಸುತ್ತಿದ್ದಾಗಲೇ ಜ್ಯೋತಿ ಪ್ರಕಾಶ್ ಹಾಗೂ ಅವರ ಕಾರು ಚಾಲಕ ನವೀನ್ ಎಂಬಾತನನ್ನು ಬಂಧಿಸಲಾಗಿದೆ. ಇಂಧನ ಸಚಿವ ಕೆಜೆ ಜಾರ್ಜ್ ಜೊತೆ ಮೀಟಿಂಗ್ ನಲ್ಲಿದ್ದಾಗಲೇ OSD ಜ್ಯೋತಿ ಪ್ರಕಾಶ್ ರನ್ನು ಲೋಕಾಯುಕ್ತ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎನ್ನುವುದು ಗಮನಾರ್ಹ ವಿಚಾರ.
ಕೆಪಿಟಿಸಿಎಲ್‌ನ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿರುವ ಜ್ಯೋತಿ ಪ್ರಕಾಶ್ ಅವರು, ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ವಿಶೇಷಾಧಿಕಾರಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.ಬ್ಯಾಡರಹಳ್ಳಿಯ ನಿವಾಸಿ ಕೆ.ಎಂ. ಅನಂತರಾಜು ಅವರು ಬಡಾವಣೆ ನಿರ್ಮಾಣ ಕಾಮಗಾರಿಗೆ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿದ್ದರು. ಆದರೆ ಇದಕ್ಕೆ ಎನ್‌ಒಸಿ ನೀಡಲು ಜ್ಯೋತಿ ಪ್ರಕಾಶ್ ಅವರು, ಮಂತ್ರಿ ಹೆಸರಲ್ಲಿ 1 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಕುರಿತು ಅನಂತರಾಜು ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ಈ ದೂರಿನನ್ವಯ ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ದೇವರಾಜು ನೇತೃತ್ವದ ತಂಡ ಕಾರ್ಯಾಚರಣೆ ಕೈಗೊಂಡಿತ್ತು. ಅನಂತರಾಜು ಅವರಿಂದ ಡ್ರೈವರ್ ಮೂಲಕ OSD 50 ಸಾವಿರ ರೂ. ಪೀಕುತ್ತಿದ್ದರು. ಈ ಸಂದರ್ಭದಲ್ಲಿ ಜ್ಯೋತಿ ಪ್ರಕಾಶ್ ಮತ್ತು ಅವರ ಚಾಲಕ ನವೀನ್‌ನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ
ಮಂತ್ರಿಯ OSD ಯೇ ಲೋಕಾಯುಕ್ತ ಟ್ರ್ಯಾಪ್ ಆಗಿರುವುದು ಬಿಗ್ ಕೇಸ್.. ಇತ್ತೀಚಿಗಷ್ಟೇ ಜಾರ್ಜ್ ಆಪ್ತರ ಮೇಲೆ ಐಟಿ ದಾಳಿಯಾಗಿತ್ತು.. ಜಾರ್ಜ್ ಆಪ್ತರಾದ ಜೀತು ಕೊಟಾರಿಯ ಮತ್ತಿತರರ ಮೇಲೆ ಐಟಿ ರೇಡ್ ನಡೆದಿತ್ತು. ಇದೀಗ ಖುದ್ದು ಲೋಕಾಯುಕ್ತ ಪೊಲೀಸರಿಂದಲೇ ಸಚಿವರ OSD ದಸ್ತಗಿರಿ ಆಗಿದೆ. ಸಚಿವರ OSD ಲೋಕಾಯುಕ್ತ ಟ್ರ್ಯಾಪ್ ಪ್ರಕರಣ ಜಾರ್ಜ್ ಕುತ್ತಿಗೆಗೆ ಬರುತ್ತಾ? ಇದೀಗ ಇಂಧನ ಸಚಿವ ಕೆಜೆ ಜಾರ್ಜ್ ಅವರು ರಾಜೀನಾಮೆ ಕೊಡ್ತಾರಾ ಎಂಬ ಪ್ರಶ್ನೆ ಎದ್ದಿದೆ.
ಇನ್ನು ಇತ್ತೀಚಿಗಷ್ಟೇ ಜಾರ್ಜ್ ಆಪ್ತರ ಮನೆ ಮೇಲೂ ಕೂಡಾ ಐಟಿ ದಾಳಿಯಾಗಿತ್ತು. ಜಾರ್ಜ್ ಆಪ್ತರಾದ ಜೀತು ಕೊಟಾರಿಯಾ ಮತ್ತಿತರರ ಮೇಲೆ ಐಟಿ ದಾಳಿಯಾಗಿತ್ತು. ಇದೀಗ ಖುದ್ದು ಲೋಕಾಯುಕ್ತ ಪೊಲೀಸರಿಂದಲೇ ಸಚಿವರ ವಿಶೇಷಾಧಿಕಾರಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದ ಜ್ಯೋತಿ ಪ್ರಕಾಶ್ ದಸ್ತಗಿರಿ ಮಾಡಿದೆ. ಈ ಪ್ರಕರಣ ಈಗ ವಿಪಕ್ಷಗಳಿಗೂ ಅಸ್ತ್ರವಾಗಿದೆ


