ರಾಜ್ ಬಿ ಶೆಟ್ಟಿ ಅವರ ದುಲ್ಖರ್ ಸಲ್ಮಾನ್ ನಿರ್ಮಾಣದ ಲೋಕಃ ಚಿತ್ರವನ್ನು ಕರ್ನಾಟಕದಲ್ಲಿ ವಿತರಿಸಿ ದೊಡ್ಡ ಯಶಸ್ಸು ಕಂಡಿದ್ದಾರೆ. ಚಿತ್ರವು ಆರು ದಿನಗಳಲ್ಲಿ ಬಜೆಟ್ ಗಿಂತ ಹೆಚ್ಚು ಕೆಲೆಕ್ಷನ್ ಮಾಡಿದೆ. ಬೆಂಗಳೂರಿನಲ್ಲೂ ಚಿತ್ರ ಜನಪ್ರಿಯವಾಗಿದ್ದು, ಕಲ್ಯಾಣಿ ಪ್ರಿಯದರ್ಶನ್ ಅವರ ಸೂಪರ್ ಹೀರೋ ಪಾತ್ರವೂ ಪ್ರೇಕ್ಷಕರನ್ನು ಸೆಳೆದಿದೆ.
ರಾಜ್ ಬಿ. ಶೆಟ್ಟಿ ಅವರ ‘ಸು ಫ್ರಮ್ ಸೋ’ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಈ ಚಿತ್ರವನ್ನು ಮಲಯಾಳಂನಲ್ಲಿ ರಿಲೀಸ್ ಮಾಡಲು ದುಲ್ಖರ್ ಸಲ್ಮಾನ್ ಸಹಾಯ ಮಾಡಿದ್ದರು. ಈಗ ದುಲ್ಖರ್ ನಿರ್ಮಾಣದ ‘ಲೋಕಃ’ ಸಿನಿಮಾನ ಕರ್ನಾಟಕದಲ್ಲಿ ರಾಜ್ ಅವರು ಹಂಚಿಕೆ ಮಾಡುತ್ತಿದ್ದಾರೆ. ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಆರೇ ದಿನಕ್ಕೆ ಚಿತ್ರವು ಬಜೆಟ್ ಗಿಂತ ಹೆಚ್ಚಿನ ಕಲೆಕ್ಷನ್ ಮಾಡಿದೆ.
ಲೋಕಃ ಸಿನಿಮಾ ಕೊಚ್ಚಿಯಲ್ಲಿ ಮಾತ್ರವಲ್ಲದೆ ಬೆಂಗಳೂರಿನಲ್ಲೂ ಸಾಕಷ್ಟು ದೊಡ್ಡ ಯಶಸ್ಸು ಕಂಡಿದೆ.ಮಲಯಾಳಂ ಭಾಷೆಯಲ್ಲಿ ಸಿನಿಮಾನ ನೋಡುವ ಕೆಲಸ ಆಗುತ್ತಿದೆ.ಹೀಗಾಗಿ ಸಿನಿಮಾಗೆ ಕರ್ನಾಟಕದಿಂದಲೂ ದೊಡ್ಡ ಮಟ್ಟದಲ್ಲಿ ಹಣ ಹರಿದು ಹೋಗುತ್ತಿದೆ.ರಾಜ್ ಅವರು ಈ ಚಿತ್ರದ ಮೂಲಕ ಹಂಚಿಕೆಯಲ್ಲೂ ಗೆಲುವು ಕಂಡಿದ್ದಾರೆ.
‘ಲೋಕಃ’ ಸಿನಿಮಾದಲ್ಲಿ ಕಲ್ಯಾಣಿ ಪ್ರಿಯದರ್ಶನ್, ನಸ್ಲೆನ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾದ ಬಜೆಟ್ 30 ಕೋಟಿ ರೂಪಾಯಿ ಎನ್ನಲಾಗಿದೆ. ಆದರೆ, ಸಿನಿಮಾದ ಕಲೆಕ್ಷನ್ ಆರು ದಿನಕ್ಕೆ 38.95 ಕೋಟಿ ರೂಪಾಯಿ ಆಗಿದೆ. ವಾರದ ದಿನಗಳಲ್ಲೂ ಸಿನಿಮಾನ ಜನರು ಮುಗಿ ಬಿದ್ದು ವೀಕ್ಷಣೆ ಮಾಡುತ್ತಿದ್ದಾರೆ.
ಇಷ್ಟು ವರ್ಷಗಳಲ್ಲಿ ಸೂಪರ್ ಹೀರೋ ಪಾತ್ರಗಳು ಎಂದಾಗ ಕೇವಲ ನಟರು ಮಾತ್ರ ಇರುತ್ತಿದ್ದರು. ಆದರೆ, ಇದೇ ಮೊದಲ ಭಾರಿಗೆ ನಟಿಯೊಬ್ಬರು ಸೂಪರ್ ಹೀರೋ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ಕಲ್ಯಾಣಿ ಅವರ ಚಂದ್ರ ಪಾತ್ರ ಅನೇಕರಿಗೆ ಇಷ್ಟ ಆಗಿದೆ. ಈ ಸಿನಿಮಾ ಇನ್ನೂ ಕೆಲವು ವಾರ ಯಶಸ್ವಿ ಪ್ರದರ್ಶನ ಕಾಣುವ ನಿರೀಕ್ಷೆ ಇದೆ.