ಬೆಂಗಳೂರು : ಬೆಂಗಳೂರಿನ ಕಾರ್ಪೊರೇಟರ್ ಮಗ ಲಾಕ್ ಸಿಕ್ಕಿಬಿದ್ದಿದ್ದಾರೆ ಗಾಂಜಾ ಪೆಡ್ಲರ್ಸ್, ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಮೂವರು ಆರೋಪಿಗಳನ್ನ ಬಂಧಿಸಲಾಗಿದೆ ದುರಂತ ಏನಪ್ಪಾ ಅಂದ್ರೆ ಬೆಂಗಳೂರಿನ ಸದ್ಗುಂಟೆಪಾಳ್ಯದ ,ಮಾಜಿ ಕಾರ್ಪೊರೇಟರ್ ಬಾಬು ರೆಡ್ಡಿ ಮಗ ಕಿಶೋರ್ ಪ್ರಕಾಶ್ ರೆಡ್ಡಿಯನ್ನ ಆಂದ್ರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಗಾಂಜಾ ಖರೀದಿ ಮತ್ತು ಮಾರಾಟ ಬಯಲಾಗಿದೆ ,ಕಾಂಗ್ರೆಸ್ ಪಕ್ಷದ ಮಾಜಿ ಕಾರ್ಪೊರೇಟರ್ ಮಗ ಕಿಶೋರ್ ರೆಡ್ಡಿ ಈ ದಂಧೆಯ ಕಿಂಗ್ ಪಿನ್.

ಒಡಿಶಾದ ಕೋರಾಪುಟ್ ಜಿಲ್ಲೆಯ ಅರಗೊಂಡಾದಿಂದ ಗಾಂಜಾ ಖರೀದಿ ಮಾಡಿ ಬೆಂಗಳೂರಿನತ್ತ ಬರುತ್ತಿದ್ದ ತಂಡವೊಂದನ್ನ ,ಆಂಧ್ರಪ್ರದೇಶ ಗುಂಟೂರಿನಲ್ಲಿ ಚುನಾವಣೆ ಹಿನ್ನೆಲೆ ತಪಾಸನೆಯಲ್ಲಿದ್ದ ಪೊಲೀಸರಿಗೆ ಅನುಮಾನ ಗೊಂಡು ವಿಚಾರಣೆ ನಡೆಸುವ ವೇಳೆ ,60 ಕೆಜಿ ಗಾಂಜಾ, ಪತ್ತೆಯಾಗಿದೆ ತಕ್ಷಣ ತಂಡವನ್ನ ಬಂದಿಸಿದ ಪೊಲೀಸರು 60 ಕೆಜಿ ಗಾಂಜಾ, ಏಳು ಮೊಬೈಲ್, ಎರಡು ಕಾರು ಮತ್ತು 2.28 ಲಕ್ಷ ನಗದು ಒಟ್ಟು 44 ಲಕ್ಷ ಮೌಲ್ಯದ ವಸ್ತುಗಳನ್ನ ಜಪ್ತಿ ಮಾಡಿ ಆರೋಪಿಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.


