Wednesday, April 30, 2025
24 C
Bengaluru
LIVE
ಮನೆ#Exclusive NewsTop Newsಸಂಸತ್ ಚಳಿಗಾಲ ಅಧಿವೇಶನ: ಉಭಯ ಸದನಗಳ ಕಲಾಪ ನ.27ಕ್ಕೆ ಮುಂದೂಡಿಕೆ

ಸಂಸತ್ ಚಳಿಗಾಲ ಅಧಿವೇಶನ: ಉಭಯ ಸದನಗಳ ಕಲಾಪ ನ.27ಕ್ಕೆ ಮುಂದೂಡಿಕೆ

ನವದೆಹಲಿ: ಸಂಸತ್ತಿನಲ್ಲಿ ಪ್ರಸಕ್ತ ಸಾಲಿನ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದಂತೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರ ನಡೆದ ಕಾರಣ ಉಭಯ ಸದನಗಳ ಕಲಾಪವನ್ನು ನವೆಂಬರ್ 27ಕ್ಕೆ ಮುಂದೂಡಲಾಗಿದೆ.

ಅಧಿವೇಶನದ ಮೊದಲ ದಿನದಂದು ಸದನವು ಸಭೆ ಸೇರಿದ ತಕ್ಷಣ, ಮಹಾರಾಷ್ಟ್ರದ ನಾಂದೇಡ್ ಕ್ಷೇತ್ರದಿಂದ ಸದನಕ್ಕೆ ಚುನಾಯಿತರಾಗಿದ್ದ ವಸಂತರಾವ್ ಚವಾಣ್ ಮತ್ತು ಪಶ್ಚಿಮ ಬಂಗಾಳದ ಬಸಿರ್ಹತ್ ಕ್ಷೇತ್ರದಿಂದ ಚುನಾಯಿತರಾಗಿದ್ದ ಎಸ್ಕೆ ನೂರುಲ್ ಇಸ್ಲಾಂ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ಬಳಿಕ ವಿಪಕ್ಷಗಳು ವಕ್ಫ್ ಮಂಡಳಿ ವಿವಾದ ಹಾಗೂ ಮಣಿಪುರ ಗಲಭೆ ಕುರಿತು ಚರ್ಚೆಗೆ ಆಗ್ರಹಿಸಿದವು. ಈ ವಿಷಯದಲ್ಲಿ ವಾಗ್ವಾದ ಆರಂಭಗೊಂಡಿದ್ದರಿಂದ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪಗಳನ್ನು ನ.27ಕ್ಕೆ ಮುಂದೂಡಲಾಯಿತು.

ಕೇಂದ್ರ ಸರ್ಕಾರ ಒಂದು ದೇಶ, ಒಂದು ಚುನಾವಣೆ, ಬ್ಯಾಕಿಂಗ್ ಮಸೂದೆ ಮತ್ತು ರೈಲ್ವೆ ವಿಧೇಯಕ ತಿದ್ದುಪಡಿ ಮಸೂದೆ, ವಕ್ಫ್ ಮಂಡಳಿ ಮಸೂದೆ ಮತ್ತು ಪ್ರಕೃತಿ ವಿಕೋಪ ನಿರ್ವಹಣೆ ಮಸೂದೆಗಳನ್ನು ಮಂಡಿಸಲು ಮುಂದಾಗಿತ್ತು.

ಯಾವುದೇ ಮಸೂದೆ ಮಂಡನೆ ಮಾಡುವ ಮುನ್ನ ಮಣಿಪುರದಲ್ಲಿ ಮರುಕಳಿಸಿರುವ ಹಿಂಸಾಚಾರ, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದವು. ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ಸದಸ್ಯರು ಗದ್ಧಲ ಸೃಷ್ಟಿಸಿದ್ದರಿಂದ ಸಭಾಪತಿ ಕಲಾಪವನ್ನು ಮುಂದೂಡಿದರು.ನವೆಂಬರ್ 26ರ ಸಂವಿಧಾನ ದಿನ ಹಿನ್ನೆಲೆಯಲ್ಲಿ ಅಧಿವೇಶನ ನಡೆಸದಿರಲು ಹಾಗೂ ಉಭಯ ಸದನಗಳ ಸದಸ್ಯರೊಂದಿಗೆ ಸಂವಿದಾನ ಭವನದಲ್ಲಿ ಸಂವಿಧಾನ ದಿನವನ್ನು ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

 

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments