Top Newsವೈರಲ್ ನ್ಯೂಸ್

Viral News: ಅಯ್ಯೋ.. ಎಂಥಾ ಕೆಲಸ ಮಾಡ್ಕೊಂಡೆ ಚಿರತೆ? ಬಿಂದಿಗೆಯಲ್ಲಿ ಚಿರತೆ ತಲೆ!

ಆಹಾರ ಅರಸಿ ನಾಡಿಗೆ ಬಂದ ಚಿರತೆ ಹಿತ್ತಾಳೆ ಬಿಂದಿಗೆಯಲ್ಲಿ ತಲೆ ತೂರಿಸಿ ಒದ್ದಾಡಿದ ಪ್ರಕರಣ ಮಹಾರಾಷ್ಟ್ರದ ಧುಲೆ ಜಿಲ್ಲೆಯ ಗ್ರಾಮವೊಂದರಲ್ಲಿ  ನಡೆದಿದೆ.

ಹಿತ್ತಾಳೆ ಕೊಡದಲ್ಲಿ ನೀರು ಇದ್ದಿದ್ದನ್ನು ನೋಡಿದ ಬಾಯಾರಿದ ಚಿರತೆ ನೀರು ಕುಡಿಯಲು ತಲೆಯನ್ನು ಅದರೊಳಗೆ ಹುದುಗಿಸಿದೆ.. ಸ್ವಲ್ಪ ನೀರನ್ನು ಕುಡಿದಿದೆ. ಆದರೆ, ಕೊಡದಿಂದ ಏನು ಮಾಡಿದ್ರೂ ತಲೆಯನ್ನು ಹೊರ ತೆಗೆಯಲು ಚಿರತೆಗೆ ಆಗಿಲ್ಲ. ಅರಚಿಕೊಂಡು ಐದು ಗಂಟೆ ಒದ್ದಾಡಿ ಹೋಗಿದೆ. ಕಡೆಗೆ ಸುಸ್ತಾಗಿ ಮಲಗಿದೆ.

ಚಿರತೆ ಮಾಡಿಕೊಂಡ ಅವಾಂತರವನ್ನು ಗಮನಿಸಿದ ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿದ್ರು. ಸ್ಥಳಕ್ಕೆ ಬಂದ ಅರನ್ಯ ಸಿಬ್ಬಂದಿ ಚಿರತೆಗೆ ಅರವಳಿಕೆ ಮದ್ದು ನೀಡಿದ್ರು. ಚಿರತೆ ನಿತ್ರಾಣಗೊಂಡು ಮಲಗಿದಾಗ ಕಟ್ಟರ್ ಉಪಯೋಗಿಸಿ ಹಿತ್ತಾಲೆ ಕೊಡವನ್ನು ಕಟ್ ಮಾಡಿ, ಚಿರತೆಯನ್ನು ಕಾಪಾಡಿದ್ರು

ಇದೀಗ ಚಿರತೆ ಎಂದಿನಂತೆ ಅಬ್ಬರಿಸ್ತಿದೆ… ಇದಕ್ಕೆ ಸಂಬಂಧಿಸಿದ ವಿಡಿಯೋ ಈಗ ಸಖತ್ ವೈರಲ್ ಆಗಿದೆ.

 

 

 

Comments (0)

Your email address will not be published. Required fields are marked *

Back to top button