ವರದಿ : ಯತೀಶ್ ಬಾಬು, ಮಂಡ್ಯ
ಮಂಡ್ಯ : ಅರೇ ಇದೇನಪ್ಪ..ನಮ್ಮ ರಾಜ್ಯದ ಸರ್ಕಾರಿ ಇಲಾಖೆಗಳಲ್ಲಿ ಅದ್ರಲ್ಲೂ ಅಬಕಾರಿ ಇಲಾಖೆಯಲ್ಲಿ ಕರಪ್ಷನ್ ಲೀಗಲ್ ಆಗಿದೆಯಾ ಅನ್ನೋ ಪ್ರಶ್ನೆ ಇದೀಗ ಎದ್ದಿದೆ.. ಇದಕ್ಕೊಂದು ಸಾಕ್ಷಿ ಎಂಬಂತೆ ಫ್ರೀಡಂ ಟಿವಿಗೆ ಸಿಕ್ಕಿದೆ ಒಂದು ದಾಖಲೆ.. ಆ ದಾಖಲೆಯನ್ನ ಸೂಕ್ಷ್ಮವಾಗಿ ನೋಡಿದ್ರೆ, ನಿಮಗೂ ಅಬಕಾರಿ ಇಲಾಖೆಯಲ್ಲಿ ಲೀಗಲ್ಲಾಗಿಯೇ ನಡೆಯುತ್ತಿದೆ ಕರಪ್ಷನ್ ಅನ್ನಿಸದೇ ಇರದು.
ಅಂದಾಗೆ ಮಂಡ್ಯದ ಅಬಕಾರಿ ಇಲಾಖೆ ಬಾರ್ ಗಳಿಗೆ ಮಂತ್ಲಿ ಫಿಕ್ಸ್ ಮಾಡಿದೆ. ಇದಕ್ಕೆ ಸಂಬಂಧಪಟ್ಟಂತಹ ದಾಖಲಾತಿ ಇದು. ಪ್ರತಿ ಬಾರ್ ಮಾಲೀಕರು ಸ್ಥಳೀಯ ಅಬಕಾರಿ ಇನ್ಸೆಪೆಕ್ಟರ್ ಗೆ ತಿಂಗಳಿಗೆ ಇಷ್ಟು ಮೊತ್ತ ಅಂತ ಕೊಡಬೇಕಂತೆ.
ಹೌದು, ಈ ದಾಖಲೆ ಹೇಳುವಂತೆ ಮಂಡ್ಯ ಜಿಲ್ಲೆಯ ಮದ್ದೂರು ಅಬಕಾರಿ ಅಧಿಕಾರಿಗಳು ಪ್ರತಿಯೊಂದು ಬಾರ್‌ಗೂ ಮಾಮೂಲಿ ಫಿಕ್ಸ್ ಮಾಡಿದ್ದಾರೆ. ಮದ್ದೂರು ಅಬಕಾರಿ ಇನ್ಸ್‌ಪೆಕ್ಟರ್ ಸಹಿ ಇರುವ ಪತ್ರ ಇದಾಗಿದ್ದು, ತಾಲ್ಲೂಕಿನ ಎಲ್ಲಾ ಬಾರ್‌ಗಳಿಗೆ ಇಂತಿಷ್ಟು ಮಂತ್ರಿ ಅಂತ ದರ ನಿಗದಿ ಮಾಡಿ ಸಹಿ ಮಾಡಿದ್ದಾರೆ..
ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್ ಬಾರ್‌ಗಳು ಸೇರಿದಂತೆ ಮದ್ದೂರು ತಾಲ್ಲೂಕಿನ 57 ಬಾರ್‌ಗಳನ್ನು ನಮೂದಿಸಿ ಮೊತ್ತವನ್ನು ನಿಗದಿ ಮಾಡಿರುವ ದಾಖಲೆ ಫ್ರೀಡಂ ಟಿವಿಗೆ ಸಿಕ್ಕಿದ್ದು ಇದು ಸರ್ಕಾರ ನಿಗದಿ ಮಾಡಿರುವ ಮಾಮೂಲಾ ಅಥವಾ ಅಧಿಕಾರಿಗಳು ನಿಗದಿ ಮಾಡಿಕೊಂಡಿರುವ ವಸೂಲಿ ಮೊತ್ತವಾ..? ಗೊತ್ತಿಲ್ಲ..ಉತ್ತರಿಸಬೇಕಾದ ಸಚಿವರು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಸೈಲೆಂಟ್ ಆಗಿದ್ದಾರೆ.