Top Newsಕ್ರೈಂ ಸ್ಟೋರಿಸಿನಿಮಾ

ರೌಡಿಶೀಟರ್ ಪತ್ನಿಯಿಂದಲೇ ದರ್ಶನ್ ಫೋಟೋ ರಿಲೀಸ್..!

ಸರ್ಕಾರ ಹಾಗೂ ರಾಜ್ಯದ ಜನರನ್ನೇ ಬೆಚ್ಚಿ ಬೀಳಿಸಿದ್ದ ದರ್ಶನ್ ಜೈಲ್ ಫೋಟೋ ರಿಲೀಸ್ ಮಾಡಿದ್ದು ರೌಡಿಶೀಟರ್ ಪತ್ನಿ ಅನ್ನೋದು ಗೊತ್ತಾಗಿದೆ.  ಫೋಟೋದಲ್ಲಿ  ದರ್ಶನ್ ಜತೆಗಿರುವ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಈ ಚಿತ್ರವನ್ನು ತನ್ನ ಹೆಂಡತಿಗೆ ಕಳಿಸಿದ್ದ. ಆಕೆ ಅದನ್ನು ತನ್ನ  ವಾಟ್ಆಪ್ ಸ್ಟೇಟಸ್ ಗೆ ಹಾಕಿದ್ದಳು. ವಿಶೇಷ ಅಂದರೆ ಆಕೆ ದರ್ಶನ್ ಅವರ ಅಪ್ಪಟ ಅಭಿಮಾನಿ. ತನ್ನ ಪತ್ನಿಯನ್ನು ಖುಷಿಪಡಿಸಲು ರೌಡಿ ನಾಗ  ಯಾರೋ ತೆಗೆದು ವೈರಲ್ ಮಾಡಿದ್ದ ಆ ಚಿತ್ರವನ್ನು  ಕಳಿಸಿದ್ದ. ಆಕೆ ಸಂತೋಷವನ್ನು ಬೇರೆಯವರಿಗೆ ಹಂಚಲು ಈ ಫೋಟೋ ಷೇರ್ ಮಾಡಿದ್ದಳು. ಇದೀಗ ದರ್ಶನ್ ಪಾಲಿಗೆ ದುಬಾರಿ ಆಗಿದೆ. ನೆಮ್ಮದಿಂದ ಇದ್ದ ಡಿ ಬಾಸ್ ಇದೀಗ ಗುಲಬರ್ಗ ಅಥವಾ ಬಳ್ಳಾರಿ ಜೈಲಿಗೆ ಶಿಫ್ಟ್ ಆಗೋ ಸಾಧ್ಯತೆ ಇದೆ. ಜತೆಗೆ ಇದೇ ಫೋಟೋದಿಂದ ಏಳೆಂಟು ಪೊಲೀಸರು ಸಸ್ಪೆಂಡ್ ಆಗಿದ್ದಾರೆ. ಇದೆಲ್ಲ ಆಗಿದ್ದು ತನ್ನದೇ ಫ್ಯಾನ್ ನಿಂದ ಅನ್ನೋ ವಾಸ್ತವ ಮತ್ತೆ ದಚ್ಚುಗೆ ಗೊತ್ತಾಗಿದೆ. ಅಯ್ಯೋ ಕರ್ಮ.  ರಾಮೇಶ್ವರಕ್ಕೆ ಹೋದರೂ ಶನೇಶ್ವರನ ಕಾಟ ತಪ್ಪಲಿಲ್ಲ ಅನ್ನೋ ತರಾ ಆಗಿದೆ ದರ್ಶನ್ ಸ್ಥಿತಿ.

Comments (0)

Your email address will not be published. Required fields are marked *

Back to top button