Wednesday, January 28, 2026
23.8 C
Bengaluru
Google search engine
LIVE
ಮನೆ#Exclusive NewsTop Newsಶಿವರಾಜ್‌‌ಕುಮಾರ್‌ ಜೊತೆ ನಟಿಸಲಿದ್ದಾರೆ ಕುಂಭಮೇಳ ಸುಂದರಿ ಮೊನಲಿಸಾ.!

ಶಿವರಾಜ್‌‌ಕುಮಾರ್‌ ಜೊತೆ ನಟಿಸಲಿದ್ದಾರೆ ಕುಂಭಮೇಳ ಸುಂದರಿ ಮೊನಲಿಸಾ.!

ಸುಂದರಿ ಸಾಧ್ವಿ ಹರ್ಷ ಅವರ ಬಳಿಕ ಮಹಾಕುಂಭ ಮೇಳದಲ್ಲಿ ಸಖತ್ ಸೌಂಡ್ ಮಾಡಿದ್ದು ಈ ಮೋನಾಲಿಸಾ. ಸಾಮಾಜಿಕ ಜಾಲತಾಣಗಳಲ್ಲಿ ಅವಳದ್ದೇ ಚರ್ಚೆ. ಆಕೆಯ ಸೌಂದರ್ಯ ಹಾಗೂ ಕಣ್ಣೋಟಕ್ಕೆ ಎಲ್ಲರೂ ಮಾರು ಹೋಗಿದ್ದರು.

ಮಹಾಕುಂಭಮೇಳದಲ್ಲಿ ತನ್ನ ಕಣ್ಣೋಟ ಮತ್ತು ಬ್ಯುಟಿಯಿಂದ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ ರುದ್ರಾಕ್ಷಿ ಮಾರಾಟ ಮಾಡುತ್ತಿದ್ದ ಮೊನಲಿಸಾಗೆ ಇದೀಗ ಬಾಲಿಹುಡ್​​ನಿಂದ ಆಫರ್ ಬರುತ್ತಿದೆ.

ಮೊನಲಿಸಾ ಬ್ಯೂಟಿ ನೋಡಿದ ಬಾಲಿವುಡ್ ನಿರ್ಮಾಪಕ ಸನೋಜ್ ಮಿಶ್ರಾ ಎನ್ನುವರು ಇದೀಗ ಹೊಸ ಚಿತ್ರಕ್ಕೆ ಅವರನ್ನು ನಟಿಸಲು ಆಫರ್ ಗಳು ಬಂದಿವೆ ಎನ್ನಲಾಗಿದೆ.

ದಿ ಡೈರಿ ಆಫ್ ವೆಸ್ಟ್ ಬೆಂಗಾಲ್ ಮತ್ತು ರಾಮ್ ಕಿ ಜನ್ಮಭೂಮಿ ಚಿತ್ರಗಳಿಗೆ ಹೆಸರುವಾಸಿಯಾದ ನಿರ್ದೇಶಕರು ತಮ್ಮ ಮುಂದಿನ ಚಿತ್ರಕ್ಕೆ ಮೊನಲಿಸಾ ಅವರನ್ನು ಪ್ರಮುಖ ಪಾತ್ರದಲ್ಲಿ ಆಯ್ಕೆ ಮಾಡಬಹುದು.

ಮಹಾಕುಂಭಮೇಳದಲ್ಲಿ ಇಂದೋರ್ ಮಾಲೆ ಮಾರಾಟಗಾರ್ತಿ ಮೊನಲಿಸಾ ತನ್ನ ನೈಜ ಸೌಂದರ್ಯದಿಂದ ಸಾಮಾಜಿಕ ಜಾಲತಾಣದಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದಳು. ಒಂದು ದಿನದಲ್ಲಿ ಈಕೆಗೆ ಸಿಕ್ಕಾ ಜನಪ್ರಿಯತೆ ಇದೀಗ ಆಕೆ ತನ್ನ ವ್ಯಾಪಾರವನ್ನು ಮಾಡದಂತೆ ಮಾಡಿದೆ. ಮಹಾಕುಂಭಮೇಳದಲ್ಲಿ ಮೊನಲಿಸಾ ಜತೆ ಸೆಲ್ಫಿಗಾಗಿ ಮುತ್ತಿಗೆ ಬೀಳುತ್ತಿದ್ದು, ಇದರಿಂದ ಆಕೆಯನ್ನು ತನ್ನ ಊರಿಗೆ ಕರೆದುಕೊಂಡು ಹೋಗಿದ್ದಾರೆ.

ಇದರ ಬೆನ್ನಲ್ಲೇ ಈಗ ರಾಮ್‌ಚರಣ್‌ ಸಿನಿಮಾಗೆ ಆಫರ್‌ ಬಂದಿದ್ದು, ಡಾ. ಶಿವರಾಜ್ಕುಮಾರ್ ಅವರ ಮುಂಬರುವ ಸಿನಿಮಾದಲ್ಲಿ ಈ ನೈಜ ಸುಂದರಿ ಮುಖ್ಯಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾಳೆ ಎನ್ನಲಾಗಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments