ಬೆಂಗಳೂರು : ಸಿಎಂ ಸಿದ್ದರಾಮಯ್ಯ ಹೇಳಿಕೆ ಪ್ರಕಾರ ksrtc 1 ಸಾವಿರ ಬಸ್ ಸೇರ್ಪಡೆ ಮಾಡುತ್ತಿದೆ. ಇವತ್ತು 100 ಬಸ್ ಗಳನ್ನು ಬಿಡುಗಡೆ ಮಾಡುತ್ತಿದ್ದೇವೆ ಸಿಎಂ ಸಿದ್ದರಾಮಯ್ಯ ಹೆಳಿದ್ದಾರೆ. ಕೋವಿಡ್ ಸಂದರ್ಭದಲ್ಲಿ 3800 ಬಸ್ ಗಳನ್ನ ಸ್ಥಗಿತಗೊಳಿಸಿದ್ರು ಇದರಿಂದ ಬಸ್ ಗಳಲ್ಲಿ ಓಡಾಟ ನಡೆಸುತ್ತಿದ್ದವರಿಗೆ ತೊಂದರೆಯಾಯ್ತು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ವರ್ಷ 5800 ಬಸ್ ಗಳನ್ನ ರಸ್ತೆ ಸಾರಿಗೆ ನಿಗಮಕ್ಕೆ ಸೇರ್ಪಡೆ ಮಾಡಿದ್ದೇವೆ . ಚುನಾವಣಾ ಪೂರ್ವದಲ್ಲಿ ಮಹಿಳಾ ಸಬಲೀಕರಣಕೊಸ್ಕರ ಉಚಿತ ಪ್ರಯಾಣ ಅವಕಾಶ ಮಾಡಿಕೊಡುತ್ತೇವೆ ಎಂದಿದ್ವೀ , ಅಧಿಕಾರಕ್ಕೆ ಬಂದ ನಂತ್ರ ಜೂನ್ 11 ರಂದು ಇದೇ ಜಾಗದಲ್ಲಿ ಶಕ್ತಿ ಯೋಜನೆಯನ್ನ ಜಾರಿಗೆ ತಂದಿದ್ವಿ. 146 ಕೋಟಿ ಮಹಿಳೆಯರು ಶಾಲಾ ವಿಧ್ಯಾರ್ಥಿನಿಯರು ಪ್ರಯಾಣ ಮಾಡಿದ್ದಾರೆ . ನಮ್ಮ ಸರ್ಕಾರವನ್ನ ವಿರೋಧ ಪಕ್ಷದವರು ಟೀಕೆ ಮಾಡುತ್ತಾರೆ.
146 ಕೋಟಿ ಮಹಿಳೆಯರು ಪ್ರಯಾಣ ಮಾಡುತ್ತಾರೆ ಅಂದ್ರೆ ಅವರು ಟಿಕೆಟ್ ತೆಗೆದುಕೊಳ್ಳುವ ಹಣ ಉಳಿತಾಯ ಆಗಿಲ್ವಾ? ಬೆಲೆ ಹೆಚ್ಚಳವಾಗಿದೆ ಹಣದುಬ್ಬರವಾಗಿದೆ ಕೊಂಡುಕೊಳ್ಳುವ ಶಕ್ತಿಯನ್ನ ಹೆಚ್ಚು ಮಾಡ್ತೇವೆ ಎಂದಿದ್ವೀ, ಎಲ್ಲ ಜಾತಿ ಧರ್ಮ ಹಾಗೂ ಎಲ್ಲ ಪಕ್ಷದ ಬಡವರಿಗೆ ಉಚಿತ ಪ್ರಯಾಣವಿದೆ ಹಿಂದೆ ಯಾವುದಾದರೂ ಸರ್ಕಾರ ಮಾಡಿತ್ತಾ. ! 1 ಕೋಟಿ 17 ಲಕ್ಷ ಮಹಿಳಾ ಯಜಮಾನಿಗೆ 2 ಸಾವಿರ ಕೊಡುವಂತದ್ದು ಇತ್ತ ಆಗಿದ್ರೆ ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಬೇಕು ಅಲ್ವ .! ಬಿಜೆಪಿ ಮಾತು ಕೇಳಬೇಡಿ ಬಿಜೆಪಿಯವರು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ.
ನಾವು ಗ್ಯಾರಂಟಿ ಜಾರಿ ಮಾಡಿದಾಗ ರಾಜ್ಯ ದಿವಾಳಿ ಆಗುತ್ತೆ ಅಂದಿದ್ರು, ಈಗ ಅವರು ಬೇರೆ ರಾಜ್ಯದಲ್ಲಿ ಗ್ಯಾರಂಟಿ ಜಾರಿ ಮಾಡುತ್ತಿದ್ದಾರೆ ಮೋದಿ ಗ್ಯಾರಂಟಿ ಅಂತ ಶುರು ಮಾಡಿದ್ದಾರೆ. ಕಳೆದ 10 ವರ್ಷದಿಂದ ಮೋದಿ ಅಧಿಕಾರದಲ್ಲಿದ್ದಾರೆ ಏನು ಮಾಡಿದ್ದಾರೆ ಕ್ಯೂ ನಯಿ ದಿಯ ಮೋದಿ ಎಂದು ಅಣುಕಿಸಿದ ಸಿಎಂ ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಅಂದ್ರು ಮಾಡಿಲ್ಲಾ? ಕಪ್ಪು ಹಣ ತರುತ್ತೇವೆ ಅಂದ್ರು ತಂದ್ರ? ಉತ್ತರ ಪ್ರದೇಶದಲ್ಲಿ, ಬಿಹಾರದಲ್ಲಿ ಕೊಡಿ ಗ್ಯಾರಂಟಿಯನ್ನು ಅಲ್ಲಿಯೂ ಬಡವರು ಇದ್ದಾರೆ ಅಲ್ವ ಅಲ್ಲಿ ಕೊಡಲಿ ಗ್ಯಾರಂಟಿಗಳನ್ನು ಆ ರಾಜ್ಯಗಳಲ್ಲಿ ಕೊಡೋಕೆ ಆಗಲ್ಲ .
ಇವರ ಕೈಯಲ್ಲಿ ಮನೆ ಯಜಮಾನಿಗೆ 2 ಸಾವಿರ , ಯುವನಿಧಿ, ಅನ್ನ ಭಾಗ್ಯವನ್ನು ನೀವು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕೊಡಿ ಬಿಜೆಪಿಯವರೆಗೆ ನಿಮಗೆ ಕಣ್ಣು ಕಾಣುತ್ತೋ ಇಲ್ವೋ, ಜನರಿಗೆ ಯಾಕೆ ನೀವು ಸುಳ್ಳು ಹೇಳ್ತೀರಾ.? ರಾಜ್ಯದ ಜನ ಬಿಜೆಪಿಯವರ ಸುಳ್ಳುಗಳಿಗೆ ದಾರಿ ತಪ್ಪಲ್ಲ ಅನ್ನೋ ನಂಬಿಕೆ ಇದೆ. 4,530 ಕೋಟಿ ಸರ್ಕಾರ ಸಾರಿಗೆ ನಿಗಮಗಳಿಗೆ ಕೊಟ್ಟಿದ ಅಷ್ಟು ಹಣ ಮಹಿಳೆಯರಿಗೆ ಹೋಗಿದೆ. ಕೆಎಸ್ಆರ್ಟಿಸಿ ನಿಗಮದ ನೌಕರರಿಗೆ 1 ಕೋಟಿ ವಿಮೆ ಇದೆ . ತಕಾತ್ತು ದಮ್ಮು ಅಲ್ಲ ರಾಜಕೀಯ ಅಂದ್ರೆ, ಇಚ್ಚಾಶಕ್ತಿ ಇದ್ದಾಗ ಮಾತ್ರ ಜನಪರ ಕೆಲಸ ಮಾಡಲು ಸಾಧ್ಯ ನಮಗೆ ಜನಪರ ಇಚ್ಚಾಶಕ್ತಿ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.