ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಇಲಾಖೆ ಖಾಲಿ ಇರುವಂತಹ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಖಾಲಿ ಇರುವಂತಹ ಕಿರಿಯ ಸ್ಟೇಷನ್ ಪರಿಚಾರಕ, ಕಿರಿಯ ಪವರ್‌ಮ್ಯಾನ್ ಸೇರಿ ಒಟ್ಟು 2975 ಹುದ್ದೆಗಳನ್ನ ನೇಮಕ ಮಾಡಲು ಪ್ರಕಟಣೆ ಹೊರಡಿಸಿದೆ. 10ನೇ ತರಗತಿ ಪಾಸ್ ಆದಂತಹ 40 ವರ್ಷದ ಒಳಗಿನ ಅಭ್ಯರ್ಥಿಗಳು ಇದಕ್ಕೆ ಆನ್ಲೈನ್ ಮೂಲಕ ಅಪ್ಲೇ ಮಾಡಬಹುದು.
ಇವುಗಳ ಜೊತೆಗೆ ಬ್ಯಾಕ್ಲಾಗ್ ಹುದ್ದೆಗಳನ್ನೂ ಕಾಲ್ಫಾರ್ಮ್ ಮಾಡಲಾಗಿದೆ. ಈ ಹುದ್ದೆಗೆ ಸಂಬಂಧಿಸಿದ ಪಿಸಿಕಲ್ನಲ್ಲಿ ಯಾವ ರೀತಿ ಇರುತ್ತದೆ ಹಾಗೂ ಆಯ್ಕೆ ವಿಧಾನವನ್ನು ಹೇಗೆ ಮಾಡಲಾಗುತ್ತದೆ ಎಂಬುದರ ಮಾಹಿತಿ ಇಲ್ಲಿ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಮುಖ ದಿನಾಂಕಗಳ ಮಾಹಿತಿ ಇಲ್ಲಿ ನೀಡಲಾಗಿದೆ.
ಸಹನ ಶಕ್ತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಈ ಕೆಳಗಿನ ಸ್ಪರ್ಧೆಗಳಲ್ಲಿ ಕನಿಷ್ಠ 3 ಅನ್ನು ಆದರೂ ಪಾಸ್ ಮಾಡಲೇಬೇಕು. ಮೂರರಲ್ಲಿ ಪಾಸ್ ಆಗಿದ್ದರೇ ಮುಂದಿನ ಹಂತದ ಆಯ್ಕೆಗೆ ಪರಿಗಣಿಸುತ್ತಾರೆ. ಅಲ್ಲದೇ ಎಸ್ಎಸ್ಎಲ್ಸಿ ಅಲ್ಲಿ ಪಡೆದಂತ ಅಂಕಗಳನ್ನು ಬಹುಮುಖ್ಯವಾಗಿ ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. 10ನೇ ತರಗತಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆದು ಈ ಕೆಳಗಿನ 3 ಟೆಸ್ಟ್ನಲ್ಲಿ ಉತ್ತಮ ಮಟ್ಟದಲ್ಲಿ ಪಾಸ್ ಆಗಿದ್ದರೆ ಆ ಅಭ್ಯರ್ಥಿಗೆ ಉದ್ಯೋಗದ ಹಾದಿ ಸುಲಭ. ಒಂದು ವೇಳೆ ಎಸ್ಎಸ್ಎಲ್ಸಿ ಅಲ್ಲಿ ಕಡಿಮೆ ಅಂಕ ಪಡೆದರು ಈ ಸ್ಪರ್ಧೆಗಳಲ್ಲಿ ವೇಗವಾಗಿ ಹೆಚ್ಚು ಸಾಧನೆಯನ್ನ ಮಾಡಿದರೆ ಉದ್ಯೋಗದ ಭರವಸೆ ಇಡಬಹುದು.
ಯಾವ್ಯಾವ ಸ್ಪರ್ಧೆ ಇವೆ (ಸಹನ ಶಕ್ತಿ ಪರೀಕ್ಷೆ)?
- ಕರೆಂಟ್ ಕಂಬ ಹತ್ತುವುದು= 8 ಮೀಟರ್ ಎತ್ತರ ಕಡ್ಡಾಯ
- 100 ಮೀಟರ್ ರನ್ನಿಂಗ್= 14 ಸೆಕೆಂಡ್ಸ್
- ಸ್ಕಿಪ್ಪಿಂಗ್= 1 ನಿಮಿಷಕ್ಕೆ 50 ಬಾರಿ
- ಶಾಟ್ಪುಟ್(12 ಪೌಂಡ್ಗಳು)= 8 ಮೀಟರ್ ಎಸೆತ
- 800 ಮೀಟರ್ ಓಟ= 3 ನಿಮಿಷ
ಆಯ್ಕೆ ವಿಧಾನ-
ಸಹನ ಶಕ್ತಿ ಪರೀಕ್ಷೆಯ ಕನಿಷ್ಠ ಮೂರು ಸ್ಪರ್ಧೆಗಳಲ್ಲಿ ಅಭ್ಯರ್ಥಿಗಳು ಅರ್ಹತೆ ಪಡೆಯಲೇಬೇಕು. ಇಲ್ಲಿ ಅರ್ಹತೆ ಪಡೆದ ಆಧಾರದ ಮೇಲೆ ಅಂಕಗಳನ್ನು ನಿರ್ಧರಿಸಲಾಗುತ್ತದೆ. ಇಲ್ಲಿ ಪಡೆದ ಅಂಕಗಳು ಹಾಗೂ ಎಸ್ಎಸ್ಎಲ್ಸಿಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸಲಾಗುತ್ತದೆ. ಇವೆರಡರ ಶೇಕಡವಾರು ಅಂಕಗಳ ಜೇಷ್ಠತಾ ಆಧಾರದ ಮೇಲೆ ಸರ್ಕಾರದಲ್ಲಿ ಚಾಲ್ತಿಯಲ್ಲಿ ಇರುವ ಮೀಸಲಾತಿ ನಿಯಮಗಳನ್ನು ಪಾಲಿಸಿ ಉದ್ಯೋಗಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಹುದ್ದೆಗೆ ಸಂಬಂಧಿಸಿದ ದಿನಾಂಕಗಳು
- ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 21-10-2024
- ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 20-11-2024
- ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆ ದಿನಾಂಕ- 25-11-2024
- ಅರ್ಜಿ ಸಲ್ಲಿಕೆ ಮಾಡಲು ಲಿಂಕ್- https://kptcl.karnataka.gov.in