- ಅನಧಿಕೃತವಾಗಿ ನಿರ್ಮಿಸಿರುವ ಅಂಗಡಿಗಳು ತೆರವು..!
- ಪಟ್ಟಣ ಪಂಚಾಯತ್ ಅಧಿಕಾರಿಗಳಿಂದ ತೆರವು ಕಾರ್ಯಾಚರಣೆ
- ಮೂರು ಬಾರಿ ನೋಟಿಸ್ ನೀಡಿದರೂ ತೆರವು ಮಾಡದ ಮಾಲೀಕರು..!
ಕೊಪ್ಪಳ : ಅನಧಿಕೃತವಾಗಿ ನಿರ್ಮಿಸಿರುವ ಡಬ್ಬಾ ಅಂಗಡಿಗಳು ಹಾಗೂ ಶೆಡ್ಗಳ ತೆರವು ಕಾರ್ಯಾಚರಣೆನ್ನು ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನಲ್ಲಿ ಪಟ್ಟಣ ಕೈಗೊಳ್ಳಲಾಯಿತು.ಮೂರು ಬಾರಿ ನೋಟಿಸ್ ನೀಡಿದ್ದರು ತೆರವು ಮಾಡದ ಮಾಲೀಕರು,ಈ ಹಿನ್ನೆಲೆಯಲ್ಲಿ ಇಂದು ಜೆಸಿಬಿಗಳ ಮೂಲಕ ತೆರವು ಕಾರ್ಯಾಚರಣೆ ಆರಂಭ ಮಾಡಲಾಯಿತು.
ಯಾವುದೇ ಪರವಾನಿಗೆ ಪಡೆಯದೆ ಸುಮಾರು 20 ವರ್ಷಗಳಿಂದ ಶೆಡ್ ಗಳನ್ನ ನಿರ್ಮಾಣ ಮಾಡಿ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಸ್ಥರು ಅಂಗಡಿಗಳನ್ನು ಇಂದು ತೆರವುಗೊಳಿಸಲಾಯಿತು.ಕನಕಗಿರಿ ಪಟ್ಟಣದ ವಾಲ್ಮಿಕಿ ಸರ್ಕಲ್ ಬಳಿ ನಿರ್ಮಾಣವಾಗಿದ್ದ ಅಂಗಡಿಗಳು ಮತ್ತು ಶೆಡ್ ಗಳು…ಪಟ್ಟಣ ಪಂಚಾಯತ್ ಅಧಿಕಾರಿಗಳಿಂದ ತೆರವು ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು.


