ಕೊಪ್ಪಳ : ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳ ಟಿಕೆಟ್ ಅಕಾಂಕ್ಷಿಗಳು ಸಕ್ರೀಯರಾಗಿದ್ದಾರೆ.
ಅದೇ ರೀತಿ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಮಂಚೂಣಿಯಲ್ಲಿ ಸಾಮಾನ್ಯ ಕಾರ್ಯಕರ್ತರಂತೆ ಓಡಾಡುತ್ತಿರುವುದು ಪ್ರಭಾಕರ್ ಚಿಣಿ. ಹೌದು.. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಹಳ ನಿರೀಕ್ಷೆ ಇಟ್ಕೊಂಡು ಬಿಜೆಪಿ ಸೇರ್ಪಡೆಯಾದ ಪ್ರಭಾಕರ್ ಚಿಣಿ, ಫುಲ್ ಆಕ್ಟೀವ್ ಆಗಿದ್ದಾರೆ.
ಇನ್ನು ಕ್ಷೇತ್ರದ ಮತದಾರರ ಮನಗೆದ್ದು ತನ್ನದೇ ಕಾರ್ಯಕರ್ತರ ಪಡೆ ಕಟ್ಕೊಂಡು ಕ್ಷೇತ್ರದ ತುಂಬಾ ಓಡಾಟ ನಡೆಸುತ್ತಿದ್ದಾರೆ. ಇನ್ನು 2023ರ ವಿಧಾನಸಭಾ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಕುಷ್ಟಗಿ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶ್ರೀ ದೊಡ್ಡನಗೌಡ ಪಾಟೀಲ ಗೆಲುವಿನ ಹಿಂದೆಯೂ ಪ್ರಭಾಕರ್ ಚಿಣಿ ಪಾತ್ರ ಸಾಕಷ್ಟಿತ್ತು..
ಕೊಪ್ಪಳ ಕ್ಷೇತ್ರದ ಅಭ್ಯರ್ಥಿ ಪರವಾಗಿ ದುಡಿದಿದ್ರು. ಸಣ್ಣ ನೀರಾವರಿ ಇಲಾಖೆಯ ಪ್ರದಾನ ಇಂಜಿನಿಯರ್ ಆಗಿ ನಿವೃತ್ತಿ ಹೊಂದಿರುವ ಪ್ರಭಾಕರ್ ಚಿಣಿ ಬಳಿಕ ರಾಜಕೀಯಕ್ಕೆ ಬಂದು ಉತ್ತಮ ಆಡಳಿತಗಾರ ಎನಿಸಿಕೊಂಡಿದ್ದಾರೆ. ತಾಂತ್ರಿಕ ತಜ್ಞರಾಗಿಯೂ ಸಾಕಷ್ಟು ಅನುಭವ ಹೊಂದಿದ್ದಾರೆ. ಇಂತವರ ಸೇವೆ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಅತಿ ಅವಶ್ಯವಾಗಿದ್ದು, ಸ್ಥಳೀಯ ಬಿಜೆಪಿ ನಾಯಕರು ಮುಖಂಡರು ಕೂಡ ಇವರ ಪರವಾಗಿ ಒಲವು ತೋರಿದ್ದಾರೆ.
ಕಾರ್ಯಕರ್ತರಾದಿಯಾಗಿ ಮುಂಬರಲಿರುವ ಲೋಕಸಭೆ ಚುನಾವಣೆಗೆ ಇವರೇ ಸೂಕ್ತ ಅಭ್ಯರ್ಥಿ, ಕೊಪ್ಪಳ ಕ್ಷೇತ್ರದ ಟಿಕೆಟ್ ಇವರಿಗೆ ನೀಡುವುದು ಸೂಕ್ತ ಎಂಬ ಚರ್ಚೆ ನಡೆಸುತ್ತಿದ್ದಾರೆ.. ಹೈಕಾಮಾಂಡ್ ಮಟ್ಟದಲ್ಲಿಯೂ ಇವರ ಹೆಸರು ಚಾಲ್ತಿಯಲ್ಲಿರೋದ್ರಿಂದ ಸೇವಾ ಮನೋಭಾವವುಳ್ಳ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡಬೇಕೆಂದು ಸ್ಥಳೀಯ ಬಿಜೆಪಿ ಕಾರ್ಯಾಕರ್ತರು ಒತ್ತಾಯಿಸಿದ್ದಾರೆ.