Top Newsಸುದ್ದಿ

ತುಂಗಭದ್ರಾ ಜಲಾಶಯ ಬರ್ತಿ- ಮುಖ್ಯಮಂತ್ರಿಯೊಬ್ಬರು ಬಾಗಿನ ಅರ್ಪಿಸಿದ್ದು ಇದೇ ಮೊದಲು!

ಕೊಪ್ಪಳ: ಉತ್ತಮ ಮಳೆ ಕಂಡು ಜಲಾಶಯ ತುಂಬಿ 19ನೇ ಕ್ರೆಸ್ಟ್ ಗೇಟ್ ಕೊಚ್ಚಿಹೋಗಿದ್ದ ತುಂಗಭದ್ರಾ ಜಲಾಶಯಕ್ಕೆ ಇಂದು ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬಾಗಿನ ಅರ್ಪಿಸಿದರು.

ಕೊಚ್ಚಿ ಹೋಗಿದ್ದ ಕ್ರೆಸ್ಟ್ ಗೇಟನ್ನು ಪರಿಶೀಲಿಸಲು ಸಿದ್ದರಾಮಯ್ಯ ಆಗಸ್ಟ್ 13ಕ್ಕೆ ಇಲ್ಲಿಗೆ ಬಂದಿದ್ದರು. ಅದರ ಬಳಿಕ ಇಂದು ಬಂದು ಬಾಗಿನ ಅರ್ಪಿಸಿದ್ದಾರೆ. ಈ ವೇಳೆ ಬಾಗಿನ ಅರ್ಪಿಸಿ ಮಾತನಾಡಿದ ಅವರು ತುಂಗಭದ್ರಾ ಅಣೆಕಟ್ಟು ಮತ್ತೆ ಮೈ ತುಂಬಿಕೊಳ್ಳುತ್ತಿದೆ. ನಾನೇ ಬಂದು ಬಾಗಿನ ಅರ್ಪಿಸುತ್ತೇನೆ ಎಂದು ಹೇಳಿದ್ದೆ. ಇಂದು ಈಡೇರಿದೆ ಎಂದರು.

ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ತುಂಗಭದ್ರಾ ಜಲಾಶಯಕ್ಕೆ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸಿದ್ದು, ಆ ಕೀರ್ತಿ ಸಿದ್ದರಾಮಯ್ಯನವರ ಪಾಲಾಗಿದೆ.

ಬಾಗಿನ ಅರ್ಪಣೆ ಹಿನ್ನೆಲೆ ಮುನಿರಾಬಾದನಲ್ಲಿ ಹಬ್ಬದ ವಾತವಾರಣ ಕಂಡು ಬಂತು. ಗ್ರಾಮದ ಮುಖ್ಯ ಬೀದಿಗಳನ್ನು ತಳೀರು ತೋರಣಗಳಿಂದ ಸಿಂಗರಿಸಲಾಗಿದೆ. ಗ್ರಾಮದ ವೃತ್ತಗಳಲ್ಲಿ ಬ್ಯಾನರ್ ಮತ್ತು ಫ್ಲೆಕ್ಸ್‌ ಕಂಗೊಳಿಸಿದವು.

ಕೊಪ್ಪಳ ತಾಲೂಕಿನ ಮುನಿರಾಬಾದ್​ ಬಳಿ ತುಂಗಾಭದ್ರ ಜಲಾಶಕ್ಕೆ ಬಾಗಿನ ಅರ್ಪಣೆ ಮಾಡಿದರು. ಈ ವೇಳೆ ಡಿಸಿಎಂ ಡಿ ಕೆ ಶಿವಕುಮಾರ್, ಸಚಿವರಾದ ಶಿವರಾಜ ತಂಗಡಗಿ,ಜಮೀರ್ ಅಹ್ಮದ್ ಖಾನ್, ಶರಣಪ್ರಕಾಶ್ ಪಾಟೀಲ್ ಸೇರಿ ಅನೇಕ ಸಚಿವರು ಶಾಸಕರು ಭಾಗಿಯಾಗಿದ್ದರು.

Comments (0)

Your email address will not be published. Required fields are marked *

Back to top button