ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದ 4ನೇ ದಿನ ಟೀಮ್ ಇಂಡಿಯಾದ ಆಟಗಾರರು ಅದ್ಭುತ ಪ್ರದರ್ಶನ ತೋರಿದ್ದಾರೆ. ಜಸ್ಪ್ರೀತ್ ಬೂಮ್ರಾ ಅವರ ಬೌಲಿಂಗ್ಗೆ ಆಸಿಸ್ ಪ್ಲೇಯರ್ಸ್ ಮೂಲೆ ಗುಂಪಾದರು. ನಾಥನ್ ಲಿಯಾನ್ ಬ್ಯಾಟ್ಗೆ ಟಚ್ ಆಗಿದ್ದ ಬೌಲ್ ಅನ್ನು ಕೆ.ಎಲ್ ರಾಹುಲ್ ಕಾಲುಗಳಲ್ಲಿ ಹಿಡಿದರೂ ಅಂಪೈರ್ ಔಟ್ ಕೊಡಲಿಲ್ಲ. ಇದಕ್ಕೆ ಕಾರಣ ಕೂಡ ಇದೆ.
ಆಸಿಸ್ ಸ್ಪಿನ್ನರ್ ನಾಥನ್ ಲಿಯಾನ್ 10ನೇ ಬ್ಯಾಟ್ಸ್ಮನ್ ಆಗಿ ಬ್ಯಾಟ್ ಬೀಸಲು ಕ್ರೀಸ್ಗೆ ಬಂದಿದ್ದರು. ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದ ನಾಥನ್ ಲಿಯಾನ್ರನ್ನ ಔಟ್ ಮಾಡಿದ್ದರೇ ಆಸಿಸ್ನ 2ನೇ ಇನ್ನಿಂಗ್ಸ್ ಇಂದಿಗೆ ಮುಗಿದು ಹೋಗುತ್ತಿತ್ತು. ಅದರಂತೆ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬೂಮ್ರಾ ಅವರು ಸೂಪರ್ ಆಗಿಯೇ ಬೌಲಿಂಗ್ ಮಾಡಿದ್ದರು. ಆ ಬಾಲ್ ನಾಥನ್ ಲಿಯಾನ್ ಬ್ಯಾಟ್ಗೆ ಟಚ್ ಆಗಿ ಸ್ಲಿಪ್ನಲ್ಲಿ ಹೋಯಿತು.
ಈ ವೇಳೆ ಸ್ಲಿಪ್ನಲ್ಲಿದ್ದ ಕೆ.ಎಲ್ ರಾಹುಲ್ ಕೈಯಿಂದ ಕ್ಯಾಚ್ ಮಿಸ್ ಮಾಡಿದರೂ ತನ್ನ ಎರಡು ಕಾಲುಗಳ ಸಹಾಯದಿಂದ ಬಾಲ್ ಅನ್ನು ಕ್ಯಾಚ್ ಹಿಡಿದಿದ್ದರು. ಔಟ್ ಎಂದು ಭಾರತದ ಆಟಗಾರರು ಸಂಭ್ರಮಿಸುವಾಗ ಅಂಪೈರ್ ನೋಬಾಲ್ ಎಂದು ಹೇಳಿದರು. ಜಸ್ಪ್ರಿತ್ ಬೂಮ್ರಾ ಬೌಲಿಂಗ್ ಮಾಡುವಾಗ ಒಂದು ಕಾಲನ್ನು ಬಿಳಿ ಗೆರೆಯಿಂದ ಹೊರಕ್ಕೆ ಇಟ್ಟಿದ್ದರು. ಹೀಗಾಗಿ ಅಂಪೈರ್ ನೋಬಾಲ್ ಹೇಳಿದ್ದರಿಂದ ನಾಥನ್ ಲಿಯಾನ್ ನಾಟೌಟ್ ಆಗಿದ್ದು ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.
ಇದೊಂದು ಬಾಲ್ ಅನ್ನು ಬೂಮ್ರಾ ಸರಿಯಾಗಿ ಹಿಡಿದಿದ್ದರೇ ಟೀಮ್ ಇಂಡಿಯಾ ಸಖತ್ ಖುಷಿಯಲ್ಲಿ 4ನೇ ದಿನ ಮುಗಿಸುತ್ತಿತ್ತು ಎಂದು ಹೇಳಬಹುದು. ಇನ್ನು ಈ ಪಂದ್ಯದಲ್ಲಿ ಬೂಮ್ರಾ ಅವರು 4 ವಿಕೆಟ್ಗಳನ್ನು ಪಡೆದು ತಂಡಕ್ಕೆ ಹೊಸ ಭರವಸೆಯನ್ನು ಮೂಡಿಸಿದ್ದಾರೆ. ಇನ್ನು ಸಿರಾಜ್ ಕೂಡ 3 ವಿಕೆಟ್ ಪಡೆದು ಸಂಭ್ರಮಿಸಿದ್ದಾರೆ.