Tuesday, June 24, 2025
25.9 C
Bengaluru
Google search engine
LIVE
ಮನೆಆರೋಗ್ಯKitchen Hacks: ಕಾಫಿ ಪುಡಿಯನ್ನು ಹೀಗೆ ಸಂಗ್ರಹಿಸಿಟ್ಟರೆ ವರ್ಷಗಟ್ಟಲೇ ಕೆಡುವುದಿಲ್ಲ!

Kitchen Hacks: ಕಾಫಿ ಪುಡಿಯನ್ನು ಹೀಗೆ ಸಂಗ್ರಹಿಸಿಟ್ಟರೆ ವರ್ಷಗಟ್ಟಲೇ ಕೆಡುವುದಿಲ್ಲ!

ಸಾಮಾನ್ಯವಾಗಿ ಕಾಫಿ ಪುಡಿ ಇತರ ಆಹಾರ ಪದಾರ್ಥಗಳಂತೆ ಎಕ್ಸ್​ಪೇರ್ ಆಗುವುದಿಲ್ಲ. ನೀವು ಹುರಿದ ಕಾಫಿ ಬೀಜಗಳನ್ನು ಪ್ಯಾಕೆಟ್​ನಲ್ಲಿ ಸಂಗ್ರಹಿಸಬಹುದು. ಇದರಿಂದ ಕಾಫಿ ಪುಡಿಯನ್ನು ಮಾಡಿ ವರ್ಷಗಟ್ಟಲೇ ತಾಜಾವಾಗಿ ಇಡಬಹುದು. ಹೆಚ್ಚು ದಿನಗಳವರೆಗೂ ಕಾಫಿ ಪುಡಿ ಕೆಡಬಾರದು ಅಂದರೆ ಈ ಕೆಳಗೆ ನೀಡಲಾದ ಕೆಲ ಟಿಪ್ಸ್ ಫಾಲೋ ಮಾಡಿ.

ಬೆಳಗ್ಗೆ ಎದ್ದ ಕೂಡಲೇ ಕಾಫಿ ಕುಡಿಯುವ ಮೂಲಕ ಅನೇಕ ಮಂದಿ ದಿನ ಆರಂಭಿಸುತ್ತಾರೆ. ಬೆಳಗ್ಗೆ, ಮಧ್ಯಾಹ್ನ, ಸಂಜೆ ಯಾವುದೇ ಆಗಿರಲಿ ಕಾಫಿ ನಮ್ಮ ಕಳೆದುಹೋದ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಎಷ್ಟೋ ಮಂದಿಗೆ ಕಾಫಿ ಕುಡಿಯದೇ ಇದ್ದರೆ ಆ ದಿನ ಇನ್ ಕಂಪ್ಲೀಟ್ ಆಗಿರುತ್ತದೆ.

ಈ ಕಾರಣದಿಂದ ಎಷ್ಟೋ ಮಂದಿಗೆ ಕಾಫಿ ಎಂದರೆ ತುಂಬಾ ಇಷ್ಟ. ಆದರೆ ಬಹುತೇಕ ಮಂದಿಗೆ ಕಷ್ಟಪಟ್ಟು ಖರೀದಿಸಿದ ಕಾಫಿ ಪುಡಿಯನ್ನು ವ್ಯರ್ಥವಾಗದಂತೆ ಸಂಗ್ರಹಿಸುವುದು ಹೇಗೆ ಎಂದು ಮಾತ್ರ ಗೊತ್ತಿಲ್ಲ. ಕಾಫಿ ಪುಡಿಯನ್ನು ಸರಿಯಾಗಿ ಶೇಖರಿಸಿಡದಿದ್ದರೆ, ಕಾಫಿ ಪುಡಿ ಹಾಳಾಗಬಹುದು. ಸಾಮಾನ್ಯವಾಗಿ ಕಾಫಿ ಪುಡಿ ಇತರ ಆಹಾರ ಪದಾರ್ಥಗಳಂತೆ ಎಕ್ಸ್​ಪೇರ್ ಆಗುವುದಿಲ್ಲ. ನೀವು ಹುರಿದ ಕಾಫಿ ಬೀಜಗಳನ್ನು ಪ್ಯಾಕೆಟ್​ನಲ್ಲಿ ಸಂಗ್ರಹಿಸಬಹುದು. ಇದರಿಂದ ಕಾಫಿ ಪುಡಿಯನ್ನು ಮಾಡಿ ವರ್ಷಗಟ್ಟಲೇ ತಾಜಾವಾಗಿ ಇಡಬಹುದು. ಹೆಚ್ಚು ದಿನಗಳವರೆಗೂ ಕಾಫಿ ಪುಡಿ ಕೆಡಬಾರದು ಅಂದರೆ ಈ ಕೆಳಗೆ ನೀಡಲಾದ ಟಿಪ್ಸ್ ಫಾಲೋ ಮಾಡಿ.

 

ಸರಿಯಾದ ಧಾರಕವನ್ನು ಬಳಸಿ: ಕಾಫಿ ಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿ. ಏಕೆಂದರೆ ಗಾಳಿ ಒಳಗೆ ಬಂದರೆ ಕಾಫಿ ಪುಡಿಯ ರುಚಿ, ವಾಸನೆ, ರಚನೆ ಇತ್ಯಾದಿಗಳು ಹಾಳಾಗುತ್ತದೆ. ಇದರಿಂದ ರುಚಿ ಕಡಿಮೆ ಆಗಬಹುದು. ತಂಪಾದ, ಗಾಢವಾದ ಸ್ಥಳದಲ್ಲಿ ಸಂಗ್ರಹಿಸಿ: ಕಾಫಿ ಡಬ್ಬಿಯನ್ನು ಯಾವಾಗಲೂ ತಂಪಾದ, ಗಾಢವಾದ ಸ್ಥಳದಲ್ಲಿ ಇರಿಸಿ. ಶಾಖ ಮತ್ತು ಸೂರ್ಯನ ಬೆಳಕಿನಿಂದ ದೂರವಿರಿ. ಸ್ಟೌವ್ ಅಥವಾ ಶಾಖವನ್ನು ಉತ್ಪಾದಿಸುವ ಇತರ ವಸ್ತುಗಳ ಬಳಿ ಕಾಫಿ ಪುಡಿಯನ್ನು ಸಂಗ್ರಹಿಸಬೇಡಿ.

ತೇವಾಂಶವನ್ನು ತಪ್ಪಿಸಿ: ತೇವಾಂಶವು ಕಾಫಿ ಪುಡಿಯ ರುಚಿಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಕಾಫಿಯನ್ನು ಶುಷ್ಕ ವಾತಾವರಣದಲ್ಲಿ ಇರಿಸಿ. ಕಾಫಿಯನ್ನು ರೆಫ್ರಿಜರೇಟರ್ ಅಥವಾ ಫ್ರೀಜರ್ನಲ್ಲಿ ಸಂಗ್ರಹಿಸಬೇಡಿ. ಏಕೆಂದರೆ ಇದು ಕಾಫಿಯ ಗುಣಮಟ್ಟದ ಮೇಲೆ ನೆಗೆಟಿವ್ ಪರಿಣಾಮ ಬೀರಬಹುದು.
ಬಲವಾದ ವಾಸನೆಯ ಆಹಾರಗಳ ಬಳಿ ಸಂಗ್ರಹಿಸಬೇಡಿ: ಕಾಫಿ ತನ್ನ ಸುತ್ತಮುತ್ತಲಿರುವ ಪರಿಸರದ ವಾಸನೆಯನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಆದ್ದರಿಂದ ಬಲವಾದ ವಾಸನೆಯ ಮಸಾಲೆಗಳು ಅಥವಾ ತರಕಾರಿಗಳ ಬಳಿ ಕಾಫಿ ಸಂಗ್ರಹಿಸಬೇಡಿ.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments