Top Newsಕ್ರೈಂ ಸ್ಟೋರಿಸುದ್ದಿ

ಹತ್ತು ಅಡಿ ಜಾಗಕ್ಕಾಗಿ ವ್ಯಕಿಯೊಬ್ಬನ ಬರ್ಬರ ಹತ್ಯೆ

ಕಲಬುರಗಿ: ಹತ್ತು ಅಡಿ ಜಾಗಕ್ಕಾಗಿ ವ್ಯಕಿಯೊಬ್ಬನ ಬರ್ಬರ ಹತ್ಯೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಅಜಾದಪುರದಲ್ಲಿ ನಡೆದಿದೆ.

ಚಂದ್ರಕಾಂತ್ ಜಮಾದರ್ ಕೊಲೆಯಾದ ದುರ್ದೈವಿ. ಚಂದ್ರಕಾಂತ್ ಮನೆ ಹಿತ್ತಲಿನಲ್ಲಿ ಹತ್ತು ಅಡಿ ಜಾಗ ಇತ್ತು. ಪಕ್ಕದ ಮನೆ ನಿವಾಸಿ ಮೌನೇಶ್ ಗುತ್ತೆದಾರ್ ಚಂದ್ರಕಾಂತ್ ಜೊತೆ ಆ ಜಾಗ ತಮಗೆ ಸೇರಬೇಕು ಎನ್ನುತ್ತಿದ್ದ. ಚಂದ್ರಕಾಂತ್ ಆ ಜಾಗ ತಮಗೆ ಸೇರಬೇಕು ಎಂದು ಹೇಳಿದ್ದ. ಹೀಗೆ ಜಾಗದ ವಿಚಾರವಾಗಿ ಇಬ್ಬರ ಮಧ್ಯೆ ಕಿರಿಕ್ ಆಗಿ ಜಗಳ ವಿಕೋಪಕಕ್ಕೆ ಹೋಗಿದ್ದು, ಚಂದ್ರಕಾಂತ್‌ನನ್ನು ಮೌನೇಶ್ ಗುತ್ತೆದಾರ್ ಹಾಗೂ ಕುಟುಂಬದವರು ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿದ್ದಾರೆ.

ಕಲಬುರಗಿ ವಿ.ವಿ.ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Comments (0)

Your email address will not be published. Required fields are marked *

Back to top button