ಶ್ರೀರಂಗಪಟ್ಟಣ: ಕಳೆದ ಭಾನುವಾರ ಸುದೀಪ್ ಅವರ ತಾಯಿ ಸರೋಜಮ್ಮನವರು ವಿಧಿವಶರಾಗಿದ್ದು, ನಿನ್ನೆ ಮಂಗಳವಾರ ಕಾವೇರಿ ನದಿಯಲ್ಲಿ ಕಿಚ್ಚ ಸುದೀಪ್ ಅಸ್ಥಿ ವಿಸರ್ಜನೆ ಮಾಡಿದ್ದಾರೆ. ಗಂಜಾಂನ ಗೋಸಾಯಿಘಾಟ್ ಬಳಿಯ ಕಾವೇರಿ ನದಿಯಲ್ಲಿ ಮಂಗಳವಾರ ಚಿತ್ರ ನಟ ಸುದೀಪ್ ,ಅವರ ತಾಯಿ ಸರೋಜಮ್ಮರ ಅಸ್ಥಿ ವಿಸರ್ಜನೆಯನ್ನು ಮಾಡಿದರು. ಈ ವೇಳೆ ನಟ ಸುದೀಪ್ ಸಹೋದರಿಯರು, ಕುಟುಂಬಸ್ಥರು ಗೋಸಾಯಿಘಾಟ್‌ಗೆ ಆಗಮಿಸಿ ವೈದಿಕ ಶ್ರಾದ್ದ ಕಾರ್ಯದ ಪೂಜೆಯಲ್ಲಿ ಭಾಗಿಯಾಗಿ ಅಸ್ಥಿ ವಿಸರ್ಜನೆ ನೆರವೇರಿಸಿದರು. ಶ್ರೀಕ್ಷಣಾಂಬಿಕ ದೇವಾಲಯದ ಅರ್ಚಕ ರಾಘವೇಂದ್ರ ಶರ್ಮ ನೇತೃತ್ವದಲ್ಲಿ ಕಾವೇರಿ ನದಿ ದಡದಲ್ಲಿ ಅಸ್ಥಿ ವಿಸರ್ಜನೆ, ಶ್ರಾದ್ದ ಕಾರ್ಯಗಳು ಧಾರ್ಮಿಕ ವಿಧಿ ವಿಧಾನಗಳಂತೆ ನಡೆಯಿತು.