Top Newsಸಿನಿಮಾಸುದ್ದಿ

ಅಪ್ಪಂಗೆ ಹುಟ್ಟಿದ್ರೆ ತೊಡೆ ತಟ್ಟಿ ಬಾರೋ ಎಂದ ಕಿಚ್ಚ ಸುದೀಪ್​! ಬಾದ್​ಷಾ ಹಿಂಗದ್ರಾ?

ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಈಗ ಸುದೀಪ್ ಜನ್ಮದಿನದ ಪ್ರಯುಕ್ತ ‘ಮ್ಯಾಕ್ಸ್’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ. ‘ಮ್ಯಾಕ್ಸಿಮಮ್ ಮಾಸ್’ ಸಾಂಗ್ ರಿಲೀಸ್ ಆಗಲಿದೆ. ಈ ಸಾಂಗ್​ನಲ್ಲಿರೋ ಪಂಚಿಂಗ್​ ಡೈಲಾಗ್​ಗಳು ಗಮನ ಸೆಳೆದಿವೆ.

‘ಮ್ಯಾಕ್ಸಿಮಮ್ ಮಾಸ್’ ಹಾಡನ್ನು ಬರೆದಿದ್ದು ನಿರ್ದೇಶಕ ಅನೂಪ್ ಭಂಡಾರಿ ಅವರು. ‘ಅಪ್ಪಂಗೆ ಹುಟ್ಟಿದ್ರೆ ತೊಡೆತಟ್ಟಿ ಬಾರೋ’ ಎಂಬ ಸಾಲುಗಳಿಂದ ಈ ಹಾಡು ಆರಂಭ ಆಗುತ್ತದೆ. ‘ಪಂಜ ಎತ್ತಿ ಬಿಟ್ಟ ಅಂದ್ರೆ ಒಂದೂವರೆ ಟನ್ ಬಾಸ್, ರಟ್ಟೇಲ್ ಬಾಳ್ ಬಲ ಎದೆಲ್ ಇದೆ ದಮ್ ಬಾಸ್’ ಎಂಬ ಸಾಲುಗಳು ಗಮನ ಸೆಳೆದಿವೆ.

‘ಮ್ಯಾಕ್ಸಿಮಮ್ ಮಾಸ್’ ಹಾಡಿಗೆ ಖ್ಯಾತ ಸಂಗೀತ ಸಂಯೋಜಕ ಬಿ. ಅಜನೀಶ್ ಲೋಕನಾಥ್ ಮ್ಯೂಸಿಕ್ ಕೊಟ್ಟಿದ್ದಾರೆ. ಚೇತನ್ ಗಂಧರ್ವ ಅವರು ಈ ಹಾಡನ್ನು ಹಾಡಿದ್ದಾರೆ. ಎಂಸಿ ಬಿಜ್ಜು ಹಾಡಿಗೆ ರ‍್ಯಾಪ್ ಮಾಡಿದ್ದಾರೆ. ಈ ಹಾಡು ಸದ್ಯ ‘ಸರೆಗಮ ಕನ್ನಡ’ ಯೂಟ್ಯೂಬ್ ಚಾನೆಲ್ ಮೂಲಕ ರಿಲೀಸ್ ಆಗಿದೆ. ಈ ಸಾಂಗ್ ರಿಲೀಸ್ ಆದ ಸ್ವಲ್ಪ ಹೊತ್ತಲ್ಲಿ ಸಾವಿರಾರು ಬಾರಿ ವೀಕ್ಷಣೆ ಕಂಡಿದೆ. ಸುದೀಪ್ ಜನ್ಮದಿನಕ್ಕೆ ಈ ಸಾಂಗ್ ರಿಲೀಸ್ ಆಗಿರೋದು ವಿಶೇಷ.

Comments (0)

Your email address will not be published. Required fields are marked *

Back to top button