ದೆಹಲಿ: ವರ್ಷದ ಕೊನೆಯ ಹಾಗೂ ಖಗ್ರಾಸ ಸೂರ್ಯ ಗ್ರಹಣ ಬುಧವಾರ ಜರುಗಲಿದೆ. ಸೂರ್ಯ ನನ್ನು ಇಡಿಯಾಗಿ ಆವರಿಸಲಿರುವ ಗ್ರಹಣ 6 ಗಂಟೆ 4 ನಿಮಿಷಗಳಷ್ಟು ದೀರ್ಘ ಕಾಲದವರೆಗೂ ಮುಂದು ವರಿಯಲಿದೆ. ರಚಿತೇಜನನ್ನು ಚಂದ್ರ ಇಡಿಯಾಗಿ ಆವರಿಸಿ ಕೊಳ್ಳುತ್ತಿರುವುರಿಂದ ಸೂರ್ಯನ ಅಂಚು ಮಾತ್ರವೇ ವೃತ್ತಾಕಾರದಲ್ಲಿ ಗೋಚರವಾಗಲಿದೆ. ಆಗ ಸೂರ್ಯ ಅಕ್ಷರಶಃ ಕೆಂಪು ಉಂಗುರದಂತೆ ಬೆಂಕಿಯ ಬಳೆಯಂತೆ ಗೋಚರಿಸಲಿದ್ದಾನೆ. ಖಗ್ರಾಸ್ ಸೂರ್ಯಗ್ರಹಣ ಆರಂಭಗೊಳ್ಳುವ ಸಮಯದಲ್ಲಿ ಭಾರತದಲ್ಲಿನ ಕಾಲ ರಾತ್ರಿ 9.13 ಆಗಿರುತ್ತದೆ. ಹಾಗಾಗಿ, ಅಪರೂಪದ ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಫೆಸಿಫಿಕ್ ಸಾಗರ, ಚಿಲಿ ಮತ್ತು ಅರ್ಜೆಂಟೀನಾ ದೇಶಗಳ ದಕ್ಷಿಣ ಭಾಗ ಮೊದಲಾದೆಡೆ ಮಾತ್ರ ಕಾಣಿಸಿಕೊಳ್ಳಲಿದೆ.