Top Newsಸುದ್ದಿ

ಕೀನ್ಯಾ ಅದಾನಿ ಗ್ರೂಪ್‌ನೊಂದಿಗೆ ವಿಮಾನ ನಿಲ್ದಾಣ, ವಿದ್ಯುತ್ ಪ್ರಸರಣ ವ್ಯವಹಾರ ರದ್ದು..

 ನವೆಂಬರ್ 22: ಗೌತಮ್ ಅದಾನಿ ವಿರುದ್ಧ ಅಮೆರಿಕದಲ್ಲಿ ಲಂಚ ಆರೋಪ ದಾಖಲಾಗುತ್ತಿದ್ದಂತೆಯೇ ಕೀನ್ಯಾ ಸರ್ಕಾರ ಅದಾನಿ ಗ್ರೂಪ್​ಗೆ ನೀಡಿದ್ದ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಯ ಗುತ್ತಿಗೆಯನ್ನು ರದ್ದು ಮಾಡಿದೆ. ಹಾಗೆಯೇ, ಪವರ್ ಟ್ರಾನ್ಸ್​ಮಿಶನ್ ಲೈನ್​ಗಳನ್ನು ನಿರ್ಮಿಸುವ 736 ಮಿಲಿಯನ್ ಡಾಲರ್ ಒಪ್ಪಂದವನ್ನೂ ರದ್ದುಗೊಳಿಸಲಾಗಿದೆ ಎಂದು ಕೀನಾ ಅಧ್ಯಕ್ಷ ವಿಲಿಯಮ್ ರುಟೋ ತಿಳಿಸಿದ್ದಾರೆ.ನೈರೋಬಿಯ ಜೋಮೋ ಕೀನ್ಯಾಟ್ಟ ಇಂಟರ್ನ್ಆಷನಲ್ ಏರ್​ಪೋರ್ಟ್ ಅನ್ನು ಅಭಿವೃದ್ಧಿಗೊಳಿಸಿ ನಿರ್ವಹಣೆ ಮಾಡಲು ಅದಾನಿ ಗ್ರೂಪ್ ಜೊತೆ 2.5 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ ಕೀನ್ಯಾ ಸರ್ಕಾರ ನಿರ್ಧರಿಸಿತ್ತು. ಈ ಒಪ್ಪಂದದ ಪ್ರಕಾರ ಏರ್ಪೋರ್ಟ್ ಅನ್ನು ಅಭಿವೃದ್ಧಿಗೊಳಿಸಬೇಕು. ಹೊಸ ರನ್​ವೇ ಮತ್ತು ಟರ್ಮಿನಲ್ ಅನ್ನು ನಿರ್ಮಿಸಬೇಕು. ಇದಕ್ಕೆ ಬದಲಾಗಿ 30 ವರ್ಷ ಕಾಲ ಈ ಏರ್ಪೋರ್ಟ್ ಅನ್ನು ಅದಾನಿ ಗ್ರೂಪ್ ನಿರ್ವಹಣೆ ಮಾಡಬೇಕಿತ್ತು.

ಅದಾನಿ ಗ್ರೂಪ್​ಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಯೋಜನೆಯ ಗುತ್ತಿಗೆಯನ್ನು ನೀಡಿದ್ದನ್ನು ವಿರೋಧಿಸಿ ಕೀನಾದಲ್ಲಿ ಜನರಿಂದ ತೀವ್ರ ಪ್ರತಿಭಟನೆಗಳು ಕೆಲ ಕಾಲದಿಂದ ನಡೆಯುತ್ತಿವೆ. ಇದು ಕೀನ್ಯಾ ಸರ್ಕಾರಕ್ಕೆ ತಲೆನೋವಾಗಿತ್ತು.

 

Comments (0)

Your email address will not be published. Required fields are marked *

Back to top button