ಸಿನಿಮಾ : ಕಾಟೇರ ಬಹು ನಿರೀಕ್ಷಿತ ಸಿನಿಮಾ..ಡಿ ಬಾಸ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಕ್ಷಣ ಇದೀಗ ಬಂದೇ ಬಿಟ್ಟಿದ್ದ.. ಕಾಟೇರ ಸಿನಿಮಾ ಮೂಲಕ ಮತ್ತೊಂದು ಹೈಪ್ ಕ್ರಿಯೇಟ್ ಮಾಡೋದಿಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದಾಗಿದ್ದಾರೆ. ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಇನ್ನು ಬಿಡುಗಡೆಯಾಗುತ್ತಿರುವ ಬಹುತೇಕ ಎಲ್ಲಾ ಚಿತ್ರಮಂದಿರಗಳ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ.

ಡಿ ಬಾಸ್ ಅಭಿನಯಿಸಿರುವ ಡಿಫರೆಂಟ್ ಟೈಟಲ್ ಸಿನಿಮಾ ಇದಾಗಿದೆ. ಒಂದು ರಿಯಲ್ ಸ್ಟೋರಿಯನ್ನ ಸಿನಿಮಾ ಮಾಡಿ ಜನರ ಮುಂದಿಟ್ಟಿರುವ ಈ ಪ್ರಯತ್ನ ಸಫಲವಾಗುತ್ತಾ..? ಡಿ ಬಾಸ್ ಮತ್ತೊಂದು ಸುತ್ತಿಗೆ ತರೆ ಮೇಲೆ ಅಬ್ಬರಿಸಿ ಅಭಿಮಾನಿಗಳ ಸೆಳೆತವನ್ನ ಮತ್ತಷ್ಟು ಹೆಚ್ಚಿಸಿಕೊಳ್ತಾರಾ..? ಕಾದು ನೋಡಬೇಕಿದೆ. ಇನ್ನು ಕಾಟೇರಾ ಕಥೆ 70ರ ದಶಕದ್ದು ಅಂತ ಹೇಳಲಾಗುತ್ತದೆ. 70ರ ಲುಕ್ ನಲ್ಲಿ ದರ್ಶನ್ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಅಭಿಮಾನಿಗಳಿಗೆ ಕುತೂಹಲವೋ ಕುತುಹಲ

ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಜಸ್ಟ್ 96 ಗಂಟೆಯೊಳಗೆ ಎಲ್ಲಾ ಟಿಕೇಟ್ಗಳು ಸೇಲಾಗಿ ಹೋಗಿವೆ. ಬುಕ್ ಮೈ ಶೋ ನಲ್ಲಿ ಕಾಟೇರ ಟಿಕೇಟ್ ಹಾಟ್ ಕೇಕ್ ನಂತೆ ಸೇಲಾಗಿದೆ. ಸಿನಿಮಾ ಥಿಯೇಟರ್ ಗಳ ಮುಂದೆ ಈಗಾಗಲೇ ಅಭಿಮಾನಿಗಳ ಕಟೌಟ್ ಗಳು, ಸ್ಟಾರ್ ಗಳು, ಬ್ಯಾನರ್ ಗಳು ರಾರಾಜಿಸುತ್ತಿವೆ. ತೆರೆ ಮೇಲೆ ದರ್ಶನ್ ಅಬ್ಬರಿಸಿ ಬೊಬ್ಬಿರಿಯೋದು ಬಾಕಿ ಇದೆ. ಆ ಕ್ಷಣಕ್ಕಾಗಿ ಅಭಿಮಾನಿಗಳು ಕಾದು ಕೂತಿದ್ದಾರೆ. ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಸದ್ದು ಮಾಡ್ತಾನಾ ಕಾಟೇರಾ ಕಾದು ನೋಡಬೇಕು.