ಜಸ್ಟ್ ಪಾಸ್ ಹೆಚ್ಚಾಗಿ ಹೊಸಬರೇ ತಾರಬಳಗದಲ್ಲಿರೋ ಸಿನಿಮಾ. ರಂಗಾಯಣ ರಘು ಸಾಧುಕೋಕಿಲರಂತಹ ದಿಗ್ಗಜ ನಟರೊಂದಿಬ್ಬರನ್ನ ಬಿಟ್ಟರೆ ಮಿಕ್ಕವರೆಲ್ಲರೂ ಹೊಸಬರೇ..ಕನ್ನಡ ಚಿತ್ರರಂಗದಲ್ಲಿ ಹೊಸಬರೇ ಸೇರಿಕೊಂಡು ಮಾಡಿದ ಸಿನಿಮಾಗಳು ಸಾಕಷ್ಟು ಸದ್ದು ಮಾಡಿವೆ. ಅದೇ ಹಾದಿಯಲ್ಲಿ ಚಿತ್ರಿಕರಣಗೊಳ್ಳುತ್ತಾ ತೆರೆ ಮೇಲೆ ಅಪ್ಪಳಿಸೋಕೆ ಸಿದ್ದವಾಗ್ತಾ ಇರೋದು ಜಸ್ಟ್ ಪಾಸ್ ಸಿನಿಮಾ.
ಅಂದಾಗೆ ಈ ಜಸ್ಟ್ ಪಾಸ್ ಚಿತ್ರತಂಡಕ್ಕೆ ಕಾಟೇರನ ಬಲವಿದೆ. ಹೌದು ಡಿ ಬಾಸ್ ದಚ್ಚು ಯಾವಗಲೂ ಸಿನಿಮಾ ಮಾಡುವ ಹೊಸಬರನ್ನ ಪ್ರೋತ್ಸಾಹಿಸಿ ಬಲ ತುಂಬ್ತಾರೆ ಅನ್ನೋದು ಗೊತ್ತಿರೋ ವಿಚಾರ. ಅದೇ ರೀತಿ ಈ ಜಸ್ಟ್ ಪಾಸ್ ಚಿತ್ರತಂಡಕ್ಕೂ ಬೆನ್ನೆಲುಬಾಗಿ ನಿಂತಿದ್ದಾರೆ. ಈ ಸಿನಿಮಾದ ವಿಡಿಯೋ ಸಾಂಗ್ ರಿಲೀಸ್ ಇದೇ 12ನೇ ತಾರೀಕು ಡಿಬಾಸ್ ರಿಂದಲೇ ಆಗಲಿದೆ. ಸಿಂಗಾರ ಸಿರಿಯೇ ಎಂದು ಕಾಂತಾರ ಚಿತ್ರದ ಮೂಲಕ ತಮ್ಮ ಸಾಹಿತ್ಯದ ಕೌಶಲ್ಯ ಮೆರೆದ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ.
ಭೂಷಣ್ ಈ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದಾರೆ. 12ವರ್ಷದ ಹರ್ಷವರ್ಧನ್ ರಾಜ್ ಈ ಸಿನಿಮಾಗೆ ಮ್ಯೂಸಿಕ್ ಮಾಡಿ ಮ್ಯಾಜಿಕ್ ಮಾಡಿದ್ದಾರೆ. ಜಸ್ಟ್ ಪಾಸ್ ಚಿತ್ರದ ತಾರಾಗಣದಲ್ಲಿ ಶ್ರೀ, ಪ್ರಣತಿ ಹಾಗೂ ಹೊಸ ಯುವಕರ ಜೊತೆಗೆ ರಂಗಾಯಣ ರಘು, ಸಾಧು ಕೋಕಿಲರಂತಹ ದಿಗ್ಗಜರಿರೋದು ಸಿನಿಮಾಗೆ ಪ್ಲಸ್ ಆಗಲಿದೆ.