ಮನರಂಜನೆಸಿನಿಮಾ

ಕಾಟೇರ ಸಿನಿಮಾ, ದಾಖಲೆ ಕಲೆಕ್ಷನ್!

Kaatera (ಕಾಟೇರ); ಡಿ ಬಾಸ್ ದರ್ಶನ್ ಅಭಿನಯದ ಕಾಟೇರ ಸಿನಿಮಾ ತೆರೆ ಕಂಡ ಒಂದೇ ದಿನದಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ಸಿನಿಮಾಗೆ ಒಳ್ಳೆ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಭರ್ಜರಿಯಾಗಿಯೇ ತೆರೆ ಕಂಡಿರುವ ಸಿನಿಮಾಗೆ ಪ್ರಿಟಿಕೆಟ್ ಸೋಲ್ಡ್ ಔಟ್ ಆಗಿವೆ. ಸಾವಿರಕ್ಕೂ ಹೆಚ್ಚು ಥಿಯೇಟರ್ ನಲ್ಲಿ ಪ್ರದರ್ಶನ ಕಾಣುತ್ತಿದ್ದು, ಕೋಟಿ ಕೋಟಿ ಗಳಿಕೆಯತ್ತ ಮುನ್ನುಗ್ಗುತ್ತಿದೆ.

ಕಾಟೇರ ಸಿನಿಮಾದ ಮೊದಲ ದಿನ ಕಲೆಕ್ಷನ್ ಜೋರಾಗಿದೆ. ಈ ಮೂಲಕ ಕಾಟೇರ ದಾಖಲೆಯ ಕಲೆಕ್ಷನ್ ಮಾಡಿದೆ. ಈ ಒಂದು ದಾಖಲೆಯ ಲೆಕ್ಕ ನೋಡೋದಾದ್ರೆ 19 ಕೋಟಿ 79 ಲಕ್ಷ ಹಣ ಗಳಿಸಿದೆ ಎಂದು ಹೇಳಲಾಗುತ್ತಿದೆ. ಇಷ್ಟು ಗಳಿಸಿದೆ ಅಂತ ಸ್ವತಃ ಸಿನಿಮಾ ತಂಡವೇ ಮಾಹಿತಿ ಕೊಟ್ಟಿರೋದ್ರಿಂದ ಈ ಗಳಿಕೆಯ ಲೆಕ್ಕ ಪಕ್ಕಾ ಎನ್ನಬಹುದು

ಕರ್ನಾಟಕದಲ್ಲಿ ಸಿಂಗಲ್‌ ಸ್ಕ್ರೀನ್‌ ಪರದೆಗಳಲ್ಲಿ, ಮಲ್ಟಿ ಪ್ಲೆಕ್ಸ್‌ ಅಲ್ಲದ ಆನ್‌ಲೈನ್‌ ಬುಕ್ಕಿಂಗ್‌ ಇಲ್ಲದ ಸಾಮಾನ್ಯ ಚಿತ್ರಮಂದಿರಗಳಲ್ಲಿಯೂ ಕಾಟೇರ ಬಿಡುಗಡೆಯಾಗಿರುತ್ತದೆ. ಹೀಗಾಗಿ, ಮೊದಲ ದಿನದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಇನ್ನೂ ಹೆಚ್ಚಿರುವ ಸಾಧ್ಯತೆಯಿದೆ. ಒಟ್ಟಾರೆ ದಚ್ಚು ಅಭಿಮಾನಿಗಳು ಮೊದಲ ದಿನದ ಶೋಗೆ ಮುಗಿಬಿದ್ದಿದ್ದು,

ಹಲವು ದಿನಗಳ ಹಿಂದೆಯೇ ಟಿಕೆಟ್‌ ಕಾದಿರಿಸಿದ್ದರು. ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿರುವ ಸಿನಿಮಾ ವೀಕೆಂಡ್ ಮುಗಿಯೋದರೊಳಗೆ ಎಷ್ಟು ಕೋಟಿ ಬಾಚಬಹುದು ಅನ್ನೋ ಲೆಕ್ಕಚಾರದಲ್ಲಿದೆ ಸ್ಯಾಂಡಲ್ವುಡ್ ಕಾತುರದಿಂದ ಕಾಯುತ್ತಿದೆ.

Comments (0)

Your email address will not be published. Required fields are marked *

Back to top button