ಜಿಲ್ಲೆರಾಜ್ಯವೈರಲ್ ನ್ಯೂಸ್ಸುದ್ದಿ
ಕರ್ನಾಟಕ ಸಾರಿಗೆ ಸಂಸ್ಥೆಯಿಂದ ‘KEBP’ ಯೋಜನೆಗೆ ಚಾಲನೆ!

ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗದ ಜನರಿಗೆ ಸುಸ್ಥಿರ ಮತ್ತು ಆಧುನಿಕ ಸಾರಿಗೆ ಸೌಲಭ್ಯ ಒದಗಿಸಲು ಕೆಎಸ್ಆರ್ಟಿಸಿ (KSRTC) ಮಹತ್ವದ ಹೆಜ್ಜೆ ಇಟ್ಟಿದೆ. ಕೇಂದ್ರದ ‘ಪಿಎಂ ಇ-ಬಸ್’ ಮಾದರಿಯಲ್ಲೇ ರಾಜ್ಯ ಸರ್ಕಾರ ‘ಕರ್ನಾಟಕ ಎಲೆಕ್ಟ್ರಿಕಲ್ ಬಸ್ ಪ್ರೋಗ್ರಾಮ್’ (KEBP) ಜಾರಿಗೆ ಸಿದ್ಧತೆ ನಡೆಸುತ್ತಿದೆ.
ಈ ಯೋಜನೆಯ ಮೊದಲ ಹಂತದಲ್ಲಿ 1,950 ಎಲೆಕ್ಟ್ರಿಕ್ ಬಸ್ಗಳನ್ನು ರಸ್ತೆಗಿಳಿಸುವ ಗುರಿ ಹೊಂದಲಾಗಿದೆ. ‘ಶಕ್ತಿ’ ಯೋಜನೆಯಡಿ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆ ಮತ್ತು ಇಂಧನ ಕೊರತೆಗೆ ಇದು ಪರ್ಯಾಯ ಪರಿಹಾರವಾಗಲಿದೆ. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಕನಿಷ್ಠ ಒಂದು ಎಕರೆ ಜಾಗದಲ್ಲಿ ‘ಹಸಿರು ಘಟಕ’ (Green Hubs) ಸ್ಥಾಪಿಸಿ, ಅಲ್ಲಿ ಚಾರ್ಜಿಂಗ್ ಮತ್ತು ಸರ್ವಿಸ್ ಸ್ಟೇಷನ್ ನಿರ್ಮಿಸಲು ಯೋಜಿಸಲಾಗಿದೆ.
ಶಾಸಕರು ಮತ್ತು ಜಿಲ್ಲಾಡಳಿತಗಳು ಜಾಗ ಒದಗಿಸಿದರೆ, ಪ್ರತಿ ಘಟಕಕ್ಕೆ ಕನಿಷ್ಠ 20 ಬಸ್ಗಳನ್ನು ನಿಯೋಜಿಸಿ ಹಳ್ಳಿಗಳಿಗೂ ಇ-ಬಸ್ ಸಂಪರ್ಕ ಕಲ್ಪಿಸುವುದು ನಿಗಮದ ಆಶಯವಾಗಿದೆ.




