ಮದ್ಯಪಾನ ಆರೋಗ್ಯ ಹಾನಿಕಾರ ಅಂದ್ರೂ ಮದ್ಯ ಕುಡಿಯುವರ ಸಂಖ್ಯೆ ಕಡಿಮೆಯಾಗಿಲ್ಲ. ಬಿಯರ್ ಕುಡಿಯುವವರಿಗೆ ಉತ್ಪಾದನಾ ಕಂಪನಿಗಳು ಮತ್ತೊಮ್ಮೆ ಶಾಕ್ ನೀಡಿವೆ. ಒಂದು ತಿಂಗಳ ಹಿಂದೆಯಷ್ಟೆ ಬಿಯರ್ ಬೆಲೆ ಏರಿಕೆಯಾಗಿತ್ತು. ಇದೀಗ ಮತ್ತೆ ಬಿಯರ್ ಬೆಲೆ ಏರಿಕೆಯಾಗಿದೆ. ರಾಜ್ಯದಲ್ಲಿ ಬಿಯರ್ (Beer) ಬೆಲೆ 10 ರಿಂದ 20 ರೂಪಾಯಿ ಏರಿಕೆ ಮಾಡಲಾಗಿದೆ. ರಾಜ್ಯದಲ್ಲಿ ಕಳೆದ 17 ತಿಂಗಳಲ್ಲಿ 5ನೇ ಬಾರಿಗೆ ಬಿಯರ್ ಬೆಲೆ ಏರಿಕೆಯಾಗಿದೆ. ಕಂಪನಿಗಳು ಒಂದು ತಿಂಗಳ ಹಿಂದೆಯಷ್ಟೆ ಬಿಯರ್ ದರ ಏರಿಸಿದ್ದವು. ಕಚ್ಚಾ ವಸ್ತುಗಳ ಬೆಲೆ ಏರಿಕೆ ಕಾರಣ ನೀಡಿ ಮತ್ತೆ ದರ ಏರಿಕೆ ಮಾಡಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದ ಕರ್ನಾಟಕ ಸರ್ಕಾರ (Karnataka Government) ಅಧಿಕಾರಕ್ಕೆ ಬಂದ ಮೇಲೆ ಬಿಯರ್ ದರ 50ರಿಂದ 60 ರೂ.ವರೆಗೆ ಏರಿಕೆಯಾಗಿದೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com