Top Newsರಾಜಕೀಯಸುದ್ದಿ

ಬಿಜೆಪಿ-ಜೆಡಿಎಸ್ ಪಾದಯಾತ್ರೆ ನಿರ್ಧಾರ : ಪರಮೇಶ್ವರ್

ಬೆಂಗಳೂರು: ಮುಡಾ ಹಗರಣದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆಗೆ ಅನುಮತಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ತಿಳಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಾದಯಾತ್ರೆಗೆ ಅನುಮತಿ ಕೊಡಲು ಸರ್ಕಾರ ನಿರ್ಧರಿಸಿದೆ. ಶಾಂತಿಯುತವಾಗಿ ಪಾದಯಾತ್ರೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಹೀಗಾಗಿ ಪಾದಯಾತ್ರೆಗೆ ಅನುಮತಿ ಕೊಡಲು ನಿರ್ಧರಿಸಿದ್ದೇವೆ ಎಂದರು.

ಕೆಲವೇ ದಿನ ಹಿಂದಷ್ಟೇ ಮಾತನಾಡಿದ್ದ ಪರಮೇಶ್ವರ್, ಪಾದಯಾತ್ರೆಗೆ ನಾವು ಅನುಮತಿ ನೀಡುವುದಿಲ್ಲ. ಅವರು ಮಾಡುವುದಿದ್ದರೆ ಮಾಡಿಕೊಳ್ಳಲಿ, ಅದರ ಬಗ್ಗೆ ನಮ್ಮ ತಕರಾರಿಲ್ಲ. ಆದರೆ, ಅಧಿಕೃತವಾಗಿ ಪೊಲೀಸ್ ಇಲಾಖೆಯಿಂದ ನಾವು ಅನುಮತಿ ನೀಡುವುದಿಲ್ಲ ಎಂದಿದ್ದರು. ಇದೀಗ ಯೂಟರ್ನ್ ಹೊಡೆದಿದ್ದಾರೆ.

ಆತುರದಲ್ಲಿ ರಾಜ್ಯಪಾಲರಿಂದ ನೋಟಿಸ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಶೋಕಾಸ್ ನೋಟಿಸ್ ಕೊಟ್ಟಿದ್ದಾರೆ ಎಂದು ಡಾ. ಜಿ ಪರಮೇಶ್ವರ್​ ಹೇಳಿದರು. ಗುರುವಾರ ರಾತ್ರಿಯೇ ಸಂಪುಟದ ನಿರ್ಣಯ ಕಳಿಸಲು ತೀರ್ಮಾನಿಸಿದ್ದೆವು. ರಾಜ್ಯದಲ್ಲಿ ರಾಜ್ಯಪಾಲರಿಲ್ಲ, ಕಚೇರಿಗೆ ನಿನ್ನೆಯೇ ತಲುಪಿಸಿರಬೇಕು. ರಾಜ್ಯಪಾಲರ ಮೇಲೆ ಒತ್ತಡಗಳು ಬಂದಿವೆ ಅನ್ನುವ ಅನುಮಾನ ಇದೆ. ದೂರು ಪಡೆದ ದಿನವೇ ರಾಜ್ಯಪಾಲರು ನೋಟಿಸ್​ ಕೊಟ್ಟಿದ್ದಾರೆ ಎಂದು ಪರಮೇಶ್ವರ್ ಹೇಳಿದರು.

Comments (0)

Your email address will not be published. Required fields are marked *

Back to top button