ಬೀದರ್ : ಕರ್ನಾಟಕ-50 ಸಂಭ್ರಮ ಹಿನ್ನೆಲೆ ಇಂದು ಬೀದರ್ ನಗರಕ್ಕೆ ಆಗಮಿಸಿದ ಜ್ಯೋತಿ ರಥಯಾತ್ರೆಗೆ ಬೀದರ್ ಜಿಲ್ಲಾಡಳಿತ ಅದ್ದೂರಿಯಾಗಿ ಸ್ವಾಗತಿಸಿಕೊಂಡಿದ್ದು, ನಗರದಲ್ಲಿ 1 ಕಿಮೀ ಉದ್ದದ ಕನ್ನಡ ಭಾವುಟ ಹಿಡಿದು ಮೆರವಣಿಗೆ ನಡೆಸಿದ್ರು. ನಗರದ ಮೈಲೂರು ಕ್ರಾಸ್‌ನಿಂದ ಮೆರವಣಿಗೆ ಆರಂಭವಾಗಿ ನೆಹರು ಕ್ರೀಡಾಂಗಣದವರೆಗೆ ನಡೆಯಿತ. ಮೆರವಣಿಗೆಯುದ್ದಕ್ಕೂ ಕಲಾ ತಂಡಗಳು ನೃತ್ಯ ಹಾಗೂ ವಾದ್ಯ ತಂಡಗಳು ಹೆಜ್ಜೆ ಹಾಕುತ್ತಾ ಸಾಗಿದ್ರು. ಬಳಿಕ ನೆಹರು ಕ್ರೀಡಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖ ಹಾಗು ಪೊಲೀಸ್ ಇಲಾಖೆಯಿಂದ ಮನರಂಜನಾ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ 200 ಪೊಲೀಸ್ ಸಿಬ್ಬಂದಿಗಳ ಪಂಜಿನ ಕವಾಯತು ಎಲ್ಲರು ಗಮನ ಸೆಳೆದಿದ್ದು, ಪಂಜಿನಲ್ಲಿ ಮಾಡಿದ ಕರ್ನಾಟಕ 50 ಹಾಗೂ ಲವ್ ಬೀದರ್ ಎಂಬ ಚಿತ್ರಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಬಳಿಕ ಮಾತನಾಡಿದ ಎಸ್‌ಪಿ ಚನ್ನಬಸವಣ್ಣ ಲಂಗೋಟಿ, ಈ ವರ್ಷ ಕರ್ನಾಟಕ ರಾಜ್ಯ ಸುವರ್ಣ ಸಂಭ್ರಮದಲ್ಲಿದ್ದು, ಹೀಗಾಗಿ ಸಮಸ್ತ ಜನತ ವಿಶೇಷವಾಗಿ ಸಂಭ್ರಮಿಸೋಣ ಎಂದರು.