Top Newsವೈರಲ್ ನ್ಯೂಸ್ಸುದ್ದಿ

ಗ್ರ್ಯಾಮಿ ರೆಡ್ ಕಾರ್ಪೆಟ್​ನಲ್ಲಿ ಸಂಪೂರ್ಣ ಬೆತ್ತಲಾದ ಬಿಯಾಂಕಾ ಸೆನ್ಸೋರಿ : ವಿಡಿಯೋ ವೈರಲ್

ಅಮೆರಿಕದ ಜನಪ್ರಿಯ ರ‍್ಯಾಪ್ ಗಾಯಕ ಕಾನ್ಯೇ ವೆಸ್ಟ್​ ಅವರು ಒಂದಷ್ಟು ವಿವಾದಗಳನ್ನು ಮಾಡಿಕೊಂಡಿದ್ದಾರೆ. ಆ ವಿವಾದಗಳ ಸಾಲಿಗೆ ಈಗ ಹೊಸದೊಂದು ಸೇರಿಕೊಂಡಿದೆ. ಫೆಬ್ರವರಿ 2ರಂದು ನಡೆದ ಸಮಾರಂಭದಲ್ಲಿ ಕಾನ್ಯೇ ವೆಸ್ಟ್​ ಅವರು ಪತ್ನಿ ಬಿಯಾಂಕಾ ಸೆನ್ಸೊರಿ ಜೊತೆ ಕಾಣಿಸಿಕೊಂಡರು. ಈ ವೇಳೆ ಬಿಯಾಂಕಾ ಅವರು ಸಂಪೂರ್ಣ ಬೆತ್ತಲಾದರು! ಈ ಘಟನೆಯಿಂದ ಅಲ್ಲಿದ್ದ ಅನೇಕರಿಗೆ ಮುಜುಗರ ಆಯಿತು. ಕೂಡಲೇ ಕಾನ್ಯೇ ವೆಸ್ಟ್​ ಮತ್ತು ಬಿಯಾಂಕಾ ಸೆನ್ಸೊರಿ ಅವರನ್ನು ಅಲ್ಲಿಂದ ಹೊರಗೆ ಕಳಿಸಲಾಯಿತು.

ಕಾರ್ಯಕ್ರಮದ ರೆಡ್ ಕಾರ್ಪೆಟ್​​ನಲ್ಲಿ ಹಲವರು ಸೆಲೆಬ್ರಿಟಿಗಳು ಬಂದು ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಹೋಗಿದ್ದಾರೆ. ಈ ವೇಳೆ ಬಂದು ಒಂದು ದಂಪತಿಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದರ ಜತೆ ಚರ್ಚೆಗೆ ಕಾರಣವಾಗಿದೆ.

ಜನಪ್ರಿಯ ಹಾಗೂ ವಿವಾದದಿಂದಲೇ ಸದಾ ಸುದ್ದಿಯಾಗುವ ರ್ಯಾಪರ್ ಕಾನ್ಯೆ ವೆಸ್ಟ್ ಹಾಗೂ ಅವರ ಪತ್ನಿ ಮಾಡೆಲ್ ಬಿಯಾಂಕಾ ಸೆನ್ಸೋರಿ ಗ್ರ್ಯಾಮಿ ಅವಾರ್ಡ್​ಸ್​​​​ಗೆ ಬಂದಿದ್ದಾರೆ.

ಕಾನ್ಯೆ ವೆಸ್ಟ್ ಕಾರ್ನಿವಲ್ ಗಾಗಿ ಟೈ ಡೊಲ್ಲಾ ಸೈನ್ ಜತೆ ಅತ್ಯುತ್ತಮ ರ್ಯಾಪ್ ಸಾಂಗ್​ಗೆ ನಾಮಿನೇಟ್ ಆಗಿದ್ದಾರೆ.

ಕಾನ್ಯೆ ವೆಸ್ಟ್ ಕಪ್ಪು ಬಣ್ಣದ ಡ್ರೆಸ್ ಹಾಕಿಕೊಂಡು ಬಂದಿದ್ದು, ಅವರ ಪತ್ನಿ ಬಿಯಾಂಕಾ ಕಪ್ಪು ಕೋಟ್ ಹಾಕಿಕೊಂಡು ಬಂದಿದ್ದಾರೆ. ಆದರೆ ರೆಡ್ ಕಾರ್ಪೆಟ್ ಬಳಿ ಬಂದಾಗ ಬಿಯಾಂಕ ಅವರು ತಮ್ಮ ಕಪ್ಪು ಕೋಟ್ ತೆಗೆದು ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ಇದನ್ನು ನೋಡಿ ಫೋಟೋಗ್ರಾಫರ್ಸ್ ಹಾಗೂ ಉಳಿದ ಮಂದಿ ಶಾಕ್ ಆಗಿದ್ದಾರೆ. ಬಿಯಾಂಕ ಅವರು ಖಾಸಗಿ ಅಂಗ ಕಾಣುವ, ತೆಳ್ಳಗಿನ ಬಟ್ಟೆಯನ್ನು ಮಾತ್ರ ಹಾಕಿಕೊಂಡಿದ್ದಾರೆ. ಈ ಬಟ್ಎಯಲ್ಲಿ ಅವರ ಖಾಸಗಿ ಅಂಗಗಳು ಸ್ಪಷ್ಟವಾಗಿ ಕಾಣುತ್ತದೆ. ಬಿಯಾಂಕ ಯಾವ ಮುಜುಗರವೂ ಇಲ್ಲದೆ ಫೋಟೋಗೆ ನಾನಾ ರೀತಿಯಲ್ಲಿ ಪೋಸ್ ಕೊಟ್ಟಿದ್ದಾರೆ.

ಇದನ್ನು ನೋಡಿದ ಆಯೋಜಕರು ಕೂಡಲೇ ಕಾನ್ಯೆ ದಂಪತಿಗಳನ್ನು ಹೊರಗಡೆ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಅವರಾಗಿಯೇ ಕಾರ್ಯಕ್ರಮದಿಂದ ಹೊರಗೆ ಹೋಗಿದ್ದಾರೆ ಎಂದು ಕೆಲ ವರದಿಗಳು ತಿಳಿಸಿವೆ.

ಸೋಶಿಯಲ್ ಮೀಡಿಯಾದಲ್ಲಿ ಬಿಯಾಂಕಾ ಅವರ ವಿರುದ್ಧ ಖಂಡನೆ ವ್ಯಕ್ತವಾಗುತ್ತಿದೆ. ಅವರನ್ನು ಬಂಧಿಸಬೇಕು ಎಂದು ಕೂಡ ನೆಟ್ಟಿಗರು ಒತ್ತಾಯಿಸಿದ್ದಾರೆ. ರೆಡ್​ ಕಾರ್ಪೆಟ್​ನಲ್ಲಿ ಬಿಯಾಂಕಾ ಬೆತ್ತಲಾದ ವಿಡಿಯೋ ವೈರಲ್ ಆಗಿದೆ.

Comments (0)

Your email address will not be published. Required fields are marked *

Back to top button