Freedom TV

ಇಂಕಾ ಅವಾರ್ಡ್ಸ್‌ನಲ್ಲಿ ‘ಕಾಂತಾರ’ ಭರ್ಜರಿ ಬೇಟೆ!

ಇಂಕಾ ಅವಾರ್ಡ್ಸ್‌ನಲ್ಲಿ ರಿಷಬ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ ಚಾಪ್ಟರ್ 1’ ಸಿನಿಮಾ ಪ್ರಶಸ್ತಿಗಳ ಭರ್ಜರಿ ಬೇಟೆ ಆಡಿದ್ದು, ಆ ಮೂಲಕ ಸ್ಯಾಂಡಲ್‌ವುಡ್ ಖ್ಯಾತಿಯನ್ನು ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಎತ್ತಿ ಹಿಡಿದಿದೆ. ಈ ಪ್ರತಿಷ್ಠಿತ ಪ್ರಶಸ್ತಿ ಸಮಾರಂಭದಲ್ಲಿ ರಿಷಬ್ ಶೆಟ್ಟಿ ಅವರು ತಮ್ಮ ಅದ್ಭುತ ನಟನೆಗಾಗಿ ‘ಅತ್ಯುತ್ತಮ ನಟ’ ಮತ್ತು ನಿರ್ದೇಶನದ ಚಾತುರ್ಯಕ್ಕಾಗಿ ‘ಅತ್ಯುತ್ತಮ ನಿರ್ದೇಶಕ’ ಎಂಬ ಎರಡು ಪ್ರಮುಖ ಗೌರವಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಚಿತ್ರದ ನಾಯಕಿ, ಕರಾವಳಿ ಮೂಲದ ಪ್ರತಿಭಾನ್ವಿತ ನಟಿ ರುಕ್ಮಿಣಿ ವಸಂತ್ ಅವರು ‘ಅತ್ಯುತ್ತಮ ನಟಿ’ ಪ್ರಶಸ್ತಿಯನ್ನು ಬಾಚಿಕೊಳ್ಳುವ ಮೂಲಕ ಚಿತ್ರತಂಡದ ಯಶಸ್ಸಿಗೆ ಮತ್ತೊಂದು ಗರಿ ಸೇರಿಸಿದ್ದಾರೆ. ಕೇವಲ ನಟ-ನಟಿಯರಷ್ಟೇ ಅಲ್ಲದೆ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಮಹೋನ್ನತ ಚಿತ್ರಕ್ಕೆ ‘ಅತ್ಯುತ್ತಮ ಚಿತ್ರ’ ಎಂಬ ಅತ್ಯುನ್ನತ ಗೌರವ ಕೂಡ ಲಭಿಸಿರುವುದು ಚಿತ್ರತಂಡದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

ತಮಗೆ ಸಂದ ಈ ಮಹತ್ವದ ಗೌರವ ಮತ್ತು ವಿನ್ನರ್ಸ್ ಲಿಸ್ಟ್ ಅನ್ನು ರಿಷಬ್ ಶೆಟ್ಟಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಾದ್ಯಂತ ಕಾಂತಾರ ಚಿತ್ರತಂಡದ ಈ ಸಾಧನೆಗೆ ಅಭಿಮಾನಿಗಳು ಸಾಲು ಸಾಲಾಗಿ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

Comments (0)

Your email address will not be published. Required fields are marked *

Back to top button