ಬೆಳಗಾವಿ : ಗ್ರಾಮೀಣ ಭಾಗದ ಜನರ ಆರೋಗ್ಯಮಟ್ಟ ಸುಧಾರಿಸುವ ಸಲುವಾಗಿ ಕೇಂದ್ರ ಸರ್ಕಾರ ಗ್ರಾಮೀಣ ಮಟ್ಟದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಾಲನೆ ನೀಡಿದ್ರು.
ಆದ್ರೆ ಆರೋಗ್ಯ ಕೇಂದ್ರಗಳೇ ಅನಾರೋಗ್ಯದಿಂದ ಬಳಲುತ್ತಿವೆ. ಅಷ್ಟೇ ಅಲ್ಲದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಎಗ್ಗಿಲ್ಲದೇ ಭ್ರಷ್ಟಚಾರ ಆಗುತ್ತಿರುವ ಪ್ರಕರಣಗಳು ಇತ್ತಿಚೇಗೆ ದಾಖಲಾಗುತ್ತಿರುವುದು ದುರದೃಷ್ಟಕರ. ಬೆಳಗಾವಿ ಜಲ್ಲೆ, ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾಕಷ್ಟು ಭ್ರಷ್ಟಚಾರವಾಗಿರುವುದು ಬೆಳಕಿಗೆ ಬಂದಿದೆ.
ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ಆರೋಗ್ಯ ಕೇಂದ್ರದ ಬಳಕೆಗಾಗಿ ಕೆಲ ವಸ್ತುಗಳನ್ನು ಖರೀದಿ ಮಾಡಿರುವ ಬಿಲ್‌ವೊಂದನ್ನು ಕ್ಲೀಯರ್ ಮಾಡಲಾಗಿದೆ. ಆದ್ರೆ ಸರ್ಕಾರಕ್ಕೆ ಸಲ್ಲಿಸಿದ ಬಿಲ್‌ಗಳ ಯಾವುದೇ ವಸ್ತುಗಳು ಆರೋಗ್ಯ ಕೇಂದ್ರದಲ್ಲಿ ಇಲ್ಲವೆಂದು ಗ್ರಾಮಸ್ಥರು ಆರೋಪ ಮಾಡ್ತಿದ್ದಾರೆ. ಬೆಳಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೆಡಿಕಲ್ ಆಫೀಸರ್ ಡಾ. ರಾಮಕೃಷ್ಣ ಯಾದಗೂಡೆ ಹಾಗೂ ಗುತ್ತಿಗೆದಾರ ರಾಜೆಶ ದೊಡಭಾಂಗಿ ಸೇರಿ ಸರ್ಕಾರದ ಕಣ್ಣಿಗೆ ಮಣ್ಣೆರೆಚಿದ್ದಾರೆ.
ಒಟ್ಟು 11 ಲಕ್ಷ ರೂಗಳ ಬೋಗಸ್ ಬಿಲ್ ಹಾಕಿ ಹಣ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಮುತ್ತಲೂ ಸ್ವಚ್ಚತೆ ಕಾಪಾಡಿಕೊಳ್ಳದೇ ರೋಗಿಗಳು ಮತ್ತಷ್ಟು ಅನಾರೋಗ್ಯದ ಭೀತಿಯಲ್ಲಿ ಕಾಲಕಳೆಯುವಂತಾಗಿದೆ ಎಂದು ಗ್ರಾಮಸ್ಥರು ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕಳೆದ ವರ್ಷದ ಮಾರ್ಚ್‌ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕಾಗಿ ಸಾಕಷ್ಟು ಚೇರ್ಸ್, ನಾಲ್ಕು ಕಪಾಟ್, ಚೇರ್, ಲ್ಯಾಪ್ ಟಾಪ್ ಸೇರಿದಂತೆ ವಿವಿಧ ವಸ್ತುಗಳ ಬೋಗಸ್ ಬಿಲ್ ಹಾಕಿ ಹಣಪಾವತಿ ಮಾಡಿಕೊಂಡಿದ್ದಾರೆ. ಈ ಕುರಿತಂತೆ ರೈತ ಮುಖಂಡ ಪರಗೌಡ ಪಾಟೀಲ್ ಈ ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.