Top Newsಲೈಫ್ ಸ್ಟೈಲ್ಸುದ್ದಿ

ಬ್ಲಡ್ ಟೆಸ್ಟ್ ನಲ್ಲಿ ಕೊಲೆಸ್ಟ್ರಾಲ್ ಇದೆ ಎಂದು ಗೊತ್ತಾದ್ರೆ, ಡಾರ್ಕ್ ಚಾಕೋಲೆಟ್​ ತಿನ್ನುವ ಅಭ್ಯಾಸ ಮಾಡಿಕೊಳ್ಳಿ!

ಚಾಕಲೇಟ್ ಯಾರಿಗೆ ಇಷ್ಟವಿಲ್ಲ ಹೇಳಿ, ಸಣ್ಣ ಮಕ್ಕಳಿಗೆ ಇದು ಪಂಚಪ್ರಾಣವಾದರೆ ದೊಡ್ಡವರು ಹೇಗೊ ಕದ್ದು ಮುಚ್ಚಿ ಇದನ್ನು ತಿನ್ನುವರು. ಮಧುಮೇಹಿಗಳಿಗೆ ಚಾಕಲೇಟ್ ಒಳ್ಳೆಯದಲ್ಲ ಎನ್ನುವ ವಿಚಾರ ಗೊತ್ತೇ ಇದೆ. ಆದರೆ ಇದೇ ಚಾಕಲೇಟ್ ನ್ನು ಅಧಿಕ ಕೊಲೆಸ್ಟ್ರಾಲ್ ಇರುವವರು ಸೇವನೆ ಮಾಡಿದರೆ ಅದು ಒಳ್ಳೆಯದು ಎಂದು ಹೇಳಲಾಗುತ್ತದೆ.

ಕೊಲೆಸ್ಟ್ರಾಲ್ ಎಂದರೆ ಅದು ಎಲ್ ಡಿಎಲ್ ಮಟ್ಟವು ಅಧಿಕವಾಗಿ ಇರುವುದು ಎಂದರ್ಥ. ಇದರಿಂದ ಹೃದಯದ ಕಾಯಿಲೆ, ಪಾರ್ಶ್ವ ವಾಯುವಿನ ಸಮಸ್ಯೆಯು ಬರಬಹುದು. ಜೀವನಶೈಲಿ, ಆಹಾರ ಕ್ರಮ ಮತ್ತು ಸರಿಯಾದ ವ್ಯಾಯಾಮಗಳಿಂದ ಇದನ್ನು ನಿಯಂತ್ರಣದಲ್ಲಿ ಇಡಬಹುದು. ಅದೇ ರೀತಿಯಲ್ಲಿ ಡಾರ್ಕ್ ಚಾಕಲೇಟ್ ತಿಂದರೂ ಇದನ್ನು ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ.

  1. ಡಾರ್ಕ್ ಚಾಕಲೇಟ್ ಬಾಯಿಗೆ ರುಚಿ ನೀಡುವುದು ಮಾತ್ರ ವಲ್ಲದೆ, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವಲ್ಲಿ ಇದು ಪರಿಣಾಮಕಾರಿಯಾಗಿದೆ.
  2. ಡಾರ್ಕ್ ಚಾಕಲೇಟ್ ನ್ನು ಮಿತವಾಗಿ ಸೇವನೆ ಮಾಡಿದರೆ ಆಗ ದೇಹ ದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಆರೋಗ್ಯಕಾರಿಯಾಗಿ ಕಾಪಾಡ ಬಹುದು. ರುಚಿಕರವಾದ ಡಾರ್ಕ್ ಚಾಕಲೇಟ್ ನಲ್ಲಿರುವ ಹಲವಾರು ಉಪಯೋಗಗಳನ್ನು ನಾವು ತಿಳಿಯಬಹುದಾಗಿದೆ.

Comments (0)

Your email address will not be published. Required fields are marked *

Back to top button